ಐಶ್ವರ್ಯ ಜೊತೆಗಿನ ವಿಚ್ಛೇದನಕ್ಕೆ ಕಾರಣ ಬಿಚ್ಚಿಟ್ಟ ಪತಿ

Published : Nov 04, 2018, 11:48 AM IST
ಐಶ್ವರ್ಯ ಜೊತೆಗಿನ ವಿಚ್ಛೇದನಕ್ಕೆ ಕಾರಣ ಬಿಚ್ಚಿಟ್ಟ ಪತಿ

ಸಾರಾಂಶ

ವಿವಾಹವಾದ 6 ತಿಂಗಳೊಳಗೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ರ ಪುತ್ರ ತೇಜ್‌ಪ್ರತಾಪ್, ತಮ್ಮ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. 

ಪಟನಾ: ವಿವಾಹವಾದ 6 ತಿಂಗಳೊಳಗೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ರ ಪುತ್ರ ತೇಜ್‌ಪ್ರತಾಪ್, ತಮ್ಮ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ‘ನನಗೆ ಈ ಮದುವೆಯೇ ಇಷ್ಟ ಇಲ್ಲ ಎಂದು ಪೋಷಕರಿಗೆ ತಿಳಿಸಿದ್ದೆ.

ಆದರೆ ಕೊನೆಗೆ ಅವರ ಒತ್ತಾಯಕ್ಕೆ ಮದುವೆಯಾಗಿದ್ದೆ. ಆದರೆ ನಾನು ಉತ್ತರವಾದರೆ, ನನ್ನ ಪತ್ನಿ ದಕ್ಷಿಣ ಎನ್ನುವಂಥ ಸ್ಥಿತಿ ಆಗಿತ್ತು. ಪತಿ- ಪತ್ನಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು. ಪೋಷಕರ ಎದುರೇ ಗಲಾಟೆ ಸಾಮಾನ್ಯವಾಗಿತ್ತು. ನಾನೋರ್ವ ಸಾಮಾನ್ಯ. ಆಕೆಯೋ ದೆಹಲಿಯಂಥ ನಗರದಲ್ಲಿ ಶಿಕ್ಷಣ ಪಡೆದಾಕೆ. 

ನಮ್ಮಿಬ್ಬರ ನಡುವೆ ಯಾವುದೇ ವಿಷಯದಲ್ಲೂ ಹೊಂದಾಣಿಕೆ ಏರ್ಪಡಲೇ ಇಲ್ಲ. ಹೀಗೆ ಒಲ್ಲದ ಸಂಬಂಧದಲ್ಲಿ ಮುಂದುವರೆಯುವುದಕ್ಕಿಂತ ಬೇರಾಗುವುದೇ ಲೇಸು ಎನ್ನುವ ಕಾರಣಕ್ಕೆ ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ’ ಎಂದು ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

BOYS NOT ALLOWED ಅಂತ ಸ್ಟಾಲ್‌ನಲ್ಲಿ ಬೋರ್ಡ್‌ ಹಾಕಿದ ಪಾನಿಪುರಿ ಭೈಯಾ: ನೆಟ್ಟಿಗರಿಂದ ತೀವ್ರ ಆಕ್ರೋಶ
ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ