ರೈತ ಪ್ರತಿಭಟನೆ : ಪೊಲೀಸ್ ಪಿಸ್ತೂಲಿಗೆ ಗುರಿಯಾದ ವೃದ್ಧ?

By Web DeskFirst Published Oct 4, 2018, 2:02 PM IST
Highlights

ದಿಲ್ಲಿಯಲ್ಲಿ ಗಾಂಧಿ ಜಯಂತಿಯನ್ನು ರೈತರ ಪ್ರತಿಭಟನೆ ನಡೆಸಿದ್ದು ಈ ವೇಳೆಯದ್ದೇ ಎನ್ನಲಾದ ಅನೇಕ ಫೊಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಬಗೆಗಿನ ಸತ್ಯಾತ್ಯತೆ ಇಲ್ಲಿದೆ. 

ಬೆಂಗಳೂರು :  ದಿಲ್ಲಿಯಲ್ಲಿ ಗಾಂಧಿ ಜಯಂತಿಯಂದು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ ಬಳಿಕ ಇದೀಗ ಅನೇಕ ಚಿತ್ರಗಳು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಅಂತದ್ದೇ ಒಂದು ಚಿತ್ರವೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅದರಲ್ಲಿ  ಇದೀಗ ವೃದ್ಧನೋರ್ವ ಪೊಲೀಸರತ್ತ ಇಟ್ಟಿಗೆ ಬೀಸುತ್ತಿದ್ದು ಆತನಿಗೆ ಪೊಲೀಸ್ ಓರ್ವರು ಪಿಸ್ತೂಲ್ ಗುರಿಯಾಗಿಸಿಕೊಂಡಿದ್ದಾರೆ. 

ಇದನ್ನು ಅನೇಕರು ಟ್ವೀಟ್ ಮಾಡಿದ್ದು, ಕಾಶ್ಮೀರಿ ಕಲ್ಲು ತೂರಾಟಗಾರರಂತೆ ಅವರಿಗೆ ಪಿಸ್ತೂಲ್ ಗುರಿ ಇಡುವ  ಮುನ್ನ ಅವರ ಬಗ್ಗೆ ಒಮ್ಮೆ ಯೋಚಿಸಿ ಎಂದು ಎಂದು ಬರೆದುಕೊಂಡಿದ್ದಾರೆ. 

ಆದರೆ ಇದರ ಸತ್ಯಾಸತ್ಯತೆಯನ್ನು ಪರೀಕ್ಷೆ ಮಾಡಿದಾಗ  ಇದು 2013ರ ಚಿತ್ರ ಎಂದು ತಿಳಿದು ಬಂದಿದೆ.  ಮೀರತ್ ನ ಮಹಾಪಂಚಾಯತ್ ನಲ್ಲಿ  ಪೊಲೀಸರು ಹಾಗೂ ಇಲ್ಲಿನ ಜನರ ನಡುವೆ ಘರ್ಷಣೆ ನಡೆದಾಗಿನ ಫೊಟೋ ಎನ್ನುವುದು ತಿಳಿದು ಬಂದಿದೆ. 

 

Look at the farmer with a brick in his hand, facing a cop with a gun.
If you don't think the farmer is a terrorist - and I hope you don't - if you empathise with his anger, I hope you'll think again before you call a Kashmiri kid with a stone in his hand a terrorist. pic.twitter.com/7Omxax3sWj

— Kavita Krishnan (@kavita_krishnan)
click me!