ಬಿಜೆಪಿ ಸಂಗ ತೊರೆದು ಕಾಂಗ್ರೆಸಿನತ್ತ ಪಯಣ

By Web DeskFirst Published Oct 4, 2018, 1:35 PM IST
Highlights

ಇಷ್ಟು ದಿನಗಳ ಕಾಲ ಬಿಜೆಪಿಯಲ್ಲಿನ ಪಯಣವನ್ನು ಮುಕ್ತಾಯಗೊಳಿಸಿ ಕಾಂಗ್ರೆಸ್ ನತ್ತ ಪಯಣ ಬೆಳೆಸುವುದಾಗಿ ಪ್ರಧಾನಿ ನರೇಂದ್ರ ಮೋದಿಯಂತೆ ಕಾಣುವ ವ್ಯಕ್ತಿ ಹೇಳಿದ್ದಾರೆ. 

ಲಕ್ನೋ : ನರೇಂದ್ರ ಮೋದಿಯಂತೆ ಕಾಣಿಸುವ ಈ ವ್ಯಕ್ತಿ ಇದೀಗ ಬಿಜೆಪಿ ಸಂಗವನ್ನು ತೊರೆದು  ಕಾಂಗ್ರೆಸಿನತ್ತ ಪಯಣ ಬೆಳೆಸುತ್ತಿದ್ದಾರೆ. ಇವರು ಬರುತ್ತಿದ್ದರೆ ಎಲ್ಲರೂ ಕೂಡ ನರೇಂದ್ರ ಮೋದಿ ಎಂದೇ ಭಾವಿಸುವ ಹೋಲಿಕೆ ಇರುವ ಅಬಿನಂದನ್ ಪಾಟಕ್ ಇದೀಗ ತಮ್ಮ ಬೆಂಬಲಿತ ಪಕ್ಷ ಬದಲಾವಣೆ ಮಾಡುತ್ತಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರು 15 ಲಕ್ಷ ಹಣವನ್ನು ಪ್ರತಿಯೊಬ್ಬರ ಖಾತೆಗೆ ಜಮೆ ಮಾಡುವುದಾಗಿ ಭರವಸೆ ನೀಡಿದ್ದರು.  ಕಪ್ಪು ಹಣವನ್ನು ವಾಪಸ್ ತರುವುದಾಗಿ ಹೇಳಿದರು. ಇಂತಹ ಎಲ್ಲಾ ಭರವಸೆಗಳೂ ಕೂಡ ಕೇವಲ ಭರವಸೆಗಳಾಗಿಯೇ ಉಳಿದವು. ಆದ್ದರಿಂದ ಕಾಂಗ್ರೆಸ್ ನತ್ತ ಪಯಣ ಬೆಳೆಸುವ ಚಿಂತನೆಗೆ ಕಾರಣವಾಗಿದ್ದಾಗಿ ಅಭಿನಂದನ್ ಹೇಳುತ್ತಾರೆ. 

ಅಲ್ಲದೇ 2019ನೇ ಸಾಲಿನ ಚುನಾವಣೆಯಲ್ಲಿ ಬಿಜೆಪಿ ವಿರುದ್ಧವಾಗಿ ತಾವು ಪ್ರಚಾರ ಕಾರ್ಯ ನಡೆಸುವುದಾಗಿಯೂ  ಪಾಟಕ್ ಹೇಳಿದ್ದಾರೆ.  ಅಲ್ಲದೇ ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಅವರನ್ನು ಬುಧವಾರ ಭೇಟಿ ಮಾಡಿದ್ದಾರೆ. 

ತಮ್ಮನ್ನು ಅನೇಕ ಭಾರಿ ಬಿಜೆಪಿಗಾಗಿ ಕಾರ್ಯ ನಿರ್ವಹಿಸಲು ಬಳಸಿಕೊಂಡರು. 2017, 2015ನೇ ಸಾಲಿನ ಚುನಾವಣೆಯಲ್ಲಿಯೂ ಕೂಡ ಮತದಾರರ ಗಮನ ಸೆಳೆಯಲು ತಮ್ಮನ್ನು ಬಳಸಿಕೊಳ್ಳಲಾಗಿತ್ತು ಎಂದಿದ್ದಾರೆ. 

ತಾವು ನಿಜವಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೆಚ್ಚಿಕೊಂಡಿದ್ದೇವೆ. ಆದರೆ ಅವರ ಸರ್ಕಾರ ಮಾತ್ರ ಕೊಟ್ಟ ಮಾತನ್ನು ಪೂರೈಸುವಲ್ಲಿ ವಿಫಲವಾಗಿದೆ. ಆದ್ದರಿಂದ ಅವರ ವಿರುದ್ಧ ಮುಂದಿನ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಚುನಾವಣಾ ಪ್ರಚಾರ ಮಾಡಲು ತೀರ್ಮಾನಿಸಿದ್ದಾಗಿ ಹೇಳಿದ್ದಾರೆ.

click me!