
ನವದೆಹಲಿ: ಇಲ್ಲಿನ ಬುರಾರಿ ಪ್ರದೇಶದಲ್ಲಿ ನಡೆದ 11 ಜನರ ಸಾಮೂಹಿಕ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಮಾಟಗಾತಿಯೊಬ್ಬಳ ನಂಟಿನ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಗೀತಾ ಮಾ ಎಂಬ ಮಹಿಳೆಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದ್ದಾರೆ.
ಆತ್ಮಹತ್ಯೆಗೆ ಶರಣಾದ ಕುಟುಂಬ ವಾಸಿಸುತ್ತಿದ್ದ ಮನೆಯನ್ನು ನಿರ್ಮಿಸಿದ್ದ ಗುತ್ತಿಗೆದಾರನ ಮಗಳೇ ಈ ಮಾಟಗಾತಿ. ಮನೆಗೆ ವಿಚಿತ್ರ ರೀತಿಯಲ್ಲಿ 11 ಪೈಪ್‌ಗಳನ್ನು ಅಳವಡಿಸಿದ್ದು, ಈಕೆಯ ಸಲಹೆ ಮೇರೆಗಾ? ಈಕೆಯ ಸಲಹೆ ಮೇರೆಗೇ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿತಾ? ಕುಟುಂಬ ಸದಸ್ಯರ ನಡವಳಿಕೆ ಬಗ್ಗೆ ಆಕೆಗೆ ಇನ್ನೇನು ಮಾಹಿತಿ ಇರಬಹುದು ಎಂಬುದನ್ನು ಅರಿಯಲು ಆಕೆಯನ್ನು ವಶಕ್ಕೆ ಪಡೆಯಲಾಗಿದೆ.
ಕುಟುಂಬ ಸದಸ್ಯರ ಫೋನ್ ಕರೆಯ ತಪಾಸಣೆ ಮಾಡಿದಾಗ ಕಡೆಯ ಕರೆ ಈ ಮಾಟಗಾತಿಗೆ ಹೋಗಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಪ್ರಾಥಮಿಕ ವಿಚಾರಣೆ ವೇಳೆ, ನನಗೆ ಕುಟುಂಬ ಸದಸ್ಯರು ನೇರವಾಗಿ ಗೊತ್ತಿಲ್ಲ. ಕೇವಲ ತಂದೆಯಿಂದ ಅವರ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೆ. ಆತ್ಮಹತ್ಯೆಗೆ ಶರಣಾದ ಕುಟುಂಬ ಸದಸ್ಯರು ಒಂದೆರಡು ದಿನಗಳಲ್ಲಿಯೇ ನನ್ನನ್ನು ಭೇಟಿ ಮಾಟದ ಬಗ್ಗೆ ಮಾತುಕತೆ ನಡೆಸುವುದಾಗಿ ಹೇಳಿದ್ದರು. ಆದರೆ ಅಷ್ಟರಲ್ಲೇ ಆತ್ಮಹತ್ಯೆಗೆ ಶರಣಾದರು ಎಂದು ಆಕೆ ತಿಳಿಸಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.