ಬೆಂಗಳೂರಿನ ಮಡಿವಾಳದಲ್ಲಿ ಭೀಕರ ಅಫಘಾತ: ದ್ವಿಚಕ್ರ ವಾಹನಕ್ಕೆ ಟ್ರಕ್ ಡಿಕ್ಕಿ, ಒಂದೇ ಕುಟುಂಬದ ಮೂವರು

Published : Sep 21, 2017, 10:27 AM ISTUpdated : Apr 11, 2018, 12:53 PM IST
ಬೆಂಗಳೂರಿನ ಮಡಿವಾಳದಲ್ಲಿ ಭೀಕರ ಅಫಘಾತ: ದ್ವಿಚಕ್ರ ವಾಹನಕ್ಕೆ ಟ್ರಕ್ ಡಿಕ್ಕಿ, ಒಂದೇ ಕುಟುಂಬದ ಮೂವರು

ಸಾರಾಂಶ

ಟ್ರಕ್ ಚಾಲಕನ ಅಜಾಗರೂಕತೆಗೆ ಮೂರು ಜೀವಗಳು ಬಲಿಯಾಗಿರೋ ಘಟನೆ ಬೆಂಗಳೂರಿನ ಮಡಿವಾಳದಲ್ಲಿ ನಡೆದಿದೆ. ಇಲ್ಲಿನ ಸೆಂಟ್ ಜಾನ್  ಸಿಗ್ನಲ್ ಬಳಿ ವೇಗವಾಗಿ ಬರುತ್ತಿದ್ದ ಟ್ರಕ್ ದ್ವಿಚಕ್ರ ವಾಹನದ ಮೇಲೆ ಹರಿದ ಪರಿಣಾಮ ದಂಪತಿ, ಫಯಾಜ್. ಸುಲ್ತಾನ ಮತ್ತು ಇವರ 5 ವರ್ಷದ ಕಂದ ಅಬ್ದುಲ್ ಮೃತ ಪಟ್ಟಿದ್ದಾರೆ.

ಬೆಂಗಳೂರು(ಸೆ.21): ಟ್ರಕ್ ಚಾಲಕನ ಅಜಾಗರೂಕತೆಗೆ ಮೂರು ಜೀವಗಳು ಬಲಿಯಾಗಿರೋ ಘಟನೆ ಬೆಂಗಳೂರಿನ ಮಡಿವಾಳದಲ್ಲಿ ನಡೆದಿದೆ. ಇಲ್ಲಿನ ಸೆಂಟ್ ಜಾನ್  ಸಿಗ್ನಲ್ ಬಳಿ ವೇಗವಾಗಿ ಬರುತ್ತಿದ್ದ ಟ್ರಕ್ ದ್ವಿಚಕ್ರ ವಾಹನದ ಮೇಲೆ ಹರಿದ ಪರಿಣಾಮ ದಂಪತಿ, ಫಯಾಜ್. ಸುಲ್ತಾನ ಮತ್ತು ಇವರ 5 ವರ್ಷದ ಕಂದ ಅಬ್ದುಲ್ ಮೃತ ಪಟ್ಟಿದ್ದಾರೆ.

ನಿನ್ನೆ ರಾತ್ರಿ 11ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಇನ್ನು ಈ ಫಯಾಜ್ ಮತ್ತು ಸುಲ್ತಾನ  ಶ್ರೀರಾಮಂದ್ರಪುರ ನಿವಾಸಿಗಳಾಗಿದ್ದು, ನಿನ್ನೆ ರಾತ್ರಿ ಸುಲ್ತಾನ ತಾಯಿ ಮನೆಗೆ ತಮ್ಮ ಆಕ್ಟಿವಾ ಗಾಡಿಯಲ್ಲಿ ಹೋಗುತ್ತಿದ್ದರು. ಆದರೆ ಸಿಗ್ನಲ್ ಬಳಿ ಬರ್ತಿದ್ದಂತೆ ಟ್ರಕ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯಾಗುತ್ತಿದ್ದಂತೆ ಕೆಳಗೆ ಬಿದ್ದ ಫ್ಯಾಮಿಲಿ ಮೇಲೆ ಟ್ರಕ್'ನ ಹಿಂದಿನ ಚಕ್ರ ಹರಿದು ಫಯಾಜ್ ಮತ್ತು ಮಗ ಅಬ್ದುಲ್ ಸ್ಥಳದಲ್ಲೆ ಪ್ರಾಣ ಬಿಟ್ಟಿದ್ದಾರೆ.

ಇತ್ತ ಘಟನೆಯಲ್ಲಿ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದ ಸುಲ್ತಾನಳನ್ನು ಪಕ್ಕದಲ್ಲೆ ಇದ್ದ ಸೆಂಟ್ ಜಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ತೀವ್ರ ರಕ್ತಸಾವ್ರವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಸುಲ್ತಾನ ಕೂಡ ಪ್ರಾಣ ಬಿಟ್ಟಿದ್ದಾಳೆ. ಇನ್ನು ಈ ಫಯಾಜ್ ಸಂಡೆ ಬಜಾರ್ ನಲ್ಲಿ ಬಟ್ಟೆ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ. ನಿನ್ನೆ ಮೊಮ್ಮಗ ಅಬ್ದುಲ್ ನನ್ನು ಅಜ್ಜಿ ನೋಡಬೇಕು ಅಂದಿದ್ದಕ್ಕೆ ಕುಟುಂಬ ಸಮೇತ ಮಡಿವಾಳದಲ್ಲಿರುವ ಅಜ್ಜಿ ಮನೆಗೆ ಬರ್ತಿದ್ದರು.

ಟ್ರಕ್ ಚಾಲಕ ಗಾಡಿ ನಿಲ್ಲಿಸದೆ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಟ್ರಕ್ ಅಲ್ಲೆ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿರೊಂಡಿರುವ ಮಡಿವಾಳ ಸಂಚಾರಿ ಪೊಲೀಸ್ರುಟ್ರಕ್ ಅನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರೆಂಟ್‌ ಅಕೌಂಟಲ್ಲಿ ₹150 ಕೋಟಿ ಅಲ್ಲ, ₹1 ಸಾವಿರ ಕೋಟಿ ವಹಿವಾಟು
ಬಾಗಲಕೋಟೆ: ಬುದ್ಧಿಮಾಂದ್ಯನ ಮೇಲೆ ಅಮಾನವೀಯ ಹಲ್ಲೆ