ಐಎನ್’ಎಕ್ಸ್ ಮೀಡಿಯಾ ಪ್ರಕರಣ: ಕಾರ್ತಿ ಚಿದಂಬರಂಗೆ ಮಧ್ಯಂತರ ಜಾಮೀನು

By Suvarna Web DeskFirst Published Mar 9, 2018, 3:42 PM IST
Highlights

ಐಎನ್’ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಕಾರ್ತಿ ಚಿದಂಬರಂಗೆ ದೆಹಲಿ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. 

ನವದೆಹಲಿ (ಮಾ. ೦9): ಐಎನ್’ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಕಾರ್ತಿ ಚಿದಂಬರಂಗೆ ದೆಹಲಿ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. 

ಮಾರ್ಚ್ 20 ರವರೆಗೆ ಕಾರ್ತಿಗೆ ಜಾಮೀನು ನೀಡಲಾಗಿದೆ. ಕಾರ್ತಿ ವಿರುದ್ಧ ದೂರು ದಾಖಲಿಸಿರುವ ಸಿಬಿಐ ಜಾಮೀನು ನೀಡಿದರೆ ಜಾರಿ ನಿರ್ದೇಶನಾಲಯ ಮುಂದಿನ ವಿಚಾರಣೆವರೆಗೂ ಆರೋಪಿಯನ್ನು ಬಂಧಿಸುವಂತಿಲ್ಲ ನ್ಯಾಯಾಲಯ ಸ್ಪಷ್ಟಪಡಿಸಿದೆ. 
ಕಾರ್ತಿ ಚಿದಂಬರಂ ಈ ವೇಳೆ ದೇಶದಿಂದ ಹೊರ ಹೋಗದಂತೆ ಪಾಸ್’ಪೋರ್ಟ್;ನ್ನು ಸಲ್ಲಿಕೆ ಮಾಡುವಂತೆ ಆದೇಶಿಸುವ ಸಾಧ್ಯತೆಯಿದೆ.  

ಇಂದ್ರಾಣಿ-ಪೀಟರ್ ಮುಖರ್ಜಿ ಐಎನ್’ಎಕ್ಸ್ ಮೀಡಿಯಾವನ್ನು ನಡೆಸುತ್ತಿದ್ದಾಗ [ಈಗ 9X] ಫಾರಿನ್ ಇನ್ವೆಸ್ಟ್’ಮೆಂಟ್ ಪ್ರಮೋಶನ್ ಬೋರ್ಡ್ ಕ್ಲಿಯರೆನ್ಸ್’ಗಾಗಿ ಕಾರ್ತಿ ಚಿದಂಬರಂ 3.5 ಕೋಟಿಯನ್ನು ಪಡೆದಿದ್ದಾರೆ ಎನ್ನಲಾಗಿದೆ.  ಸಿಬಿಐ ತನಿಖೆ ವೇಳೆ ಇಂದ್ರಾಣಿ ಮುಖರ್ಜಿ ಇದನ್ನು ಬಹಿರಂಗಗೊಳಿಸಿದ್ದರು. ಅವರ ಹೇಳಿಕೆ ಆಧರಿಸಿ ಕಾರ್ತಿ ಚಿದಂಬರಂ ಅವರನ್ನು ಫೆ. 28 ರಂದು ಬಂಧಿಸಲಾಗಿತ್ತು. ಮಾರ್ಚ್ 1 ರಂದು 5 ದಿನಗಳ ಕಾಲ ಸಿಬಿಐ ಕಸ್ಟಡಿಗೆ ಕಳುಹಿಸಲಾಗಿತ್ತು.

click me!