ಡಿಕೆಶಿಗಿಲ್ಲ ಜಾಮೀನು: ತಿಹಾರ್ ಜೈಲು ವಾಸ ಮುಂದುವರಿಕೆ

By Web DeskFirst Published Sep 25, 2019, 5:11 PM IST
Highlights

ಅಕ್ರಮ ಆಸ್ತಿ ಪತ್ತೆ ಪ್ರಕರಣ ಸಂಬಂಧ ಮಾಜಿ ಸಚಿವ ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಜಾ| ಡಿಕೆಶಿ ಅರ್ಜಿ ವಜಾಗೊಳಿಸಿ ತೀರ್ಪು ಪ್ರಕಟಿಸಿದ ಇಡಿ ವಿಶೇಷ ನ್ಯಾಯಾಲ.

ನವದೆಹಲಿ/ಬೆಂಗಳೂರು, (ಸೆ.25): ಅಕ್ರಮ ಆಸ್ತಿ ಪತ್ತೆ ಪ್ರಕರಣ ಸಂಬಂಧ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಜಾಗೊಂಡಿದೆ. ಹೀಗಾಗಿ ಡಿಕೆಶಿಗೆ ತಿಹಾರ್ ಜೈಲೇ ಗತಿ.

"

ಇಡಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್‌ ಅವರು ಡಿಕೆಶಿ ಜಾಮೀನು ಅರ್ಜಿ ವಜಾ ಮಾಡಿ ಇಂದು (ಬುಧವಾರ) ತೀರ್ಪು ಪ್ರಕಟಿಸಿದರು.

15 ದಿನದೊಳಗೆ ಡಿಕೆಶಿಗೆ ಬಿಡುಗಡೆ ಭಾಗ್ಯ..!

ಡಿ.ಕೆ.ಶಿವಕುಮಾರ್‌ ಅವರಿಗೆ ಜಾಮೀನು ನೀಡಬಾರದು ಎಂದು ಇ.ಡಿ. ಪರ ಅಡಿಷನಲ್ ಸಾಲಿಸಿಟರ್‌ ಜನರಲ್ ಕೆ.ಎಂ. ನಟರಾಜ್ ವಾದ ಮಂಡಿಸಿದ್ದರು. ಜಾಮೀನು ಕೋರಿರುವ ಡಿ.ಕೆ.ಶಿವಕುಮಾರ್‌ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡನೆ ಮಾಡಿದ್ದರು. ಇಂದು [ಗುರುವಾರ]  ಡಿಕೆಶಿ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಲಾಗಿತ್ತು.

ಅದರಂತೆ ಇಂದು [ಗುರುವಾರ]ರೋಸ್ ಅವೆನ್ಯೂ ನ್ಯಾಯಾಲಯ ತೀರ್ಪು ನೀಡಿದ್ದು, ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಇದರಿಂದ ಡಿಕೆಶಿಗೆ ದೆಹಲಿಯ ತಿಹಾರ್ ಜೈಲುವಾಸ ಮುಂದುವರಿಯಲಿದೆ.

ಡಿಕೆಶಿ ಬಂಧನದ ನಂತರ ವಿಚಾರಣೆಗೆಂದೆ 10 ದಿನಗಳ ಕಾಲ ಡಿಕೆಶಿ ಅವರನ್ನು ಇ.ಡಿ. ಅಧಿಕಾರಿಗಳ ವಶಕ್ಕೆ ನ್ಯಾಯಾಲಯ ನೀಡಿತ್ತು. ವಿಚಾರಣಾ ಅವಧಿ ಅಂತ್ಯಗೊಂಡ ಬಳಿಕ ಡಿಕೆಶಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ.4 ದಿನ ಇ.ಡಿ.ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. 

 ಸೆ.17ರವರೆಗೆ ವಿಚಾರಣೆ ಮುಂದುವರಿದಿತ್ತು. ಮತ್ತೆ ಇ.ಡಿ. ಕಸ್ಟಡಿ ಅಂತ್ಯಗೊಂಡಿದ್ದರಿಂದ ಇ.ಡಿ. ವಿಶೇಷ ನ್ಯಾಯಾಲಯ ಡಿಕೆಶಿಯವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಅ.1ರ ತನಕ ಶಿವಕುಮಾರ್ ನ್ಯಾಯಾಂಗ ಬಂಧನಲ್ಲಿರಬೇಕು ಎಂದು ಇ.ಡಿ. ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಆದೇಶ ಪ್ರಕಟಿಸಿದ್ದರು.

ಆದರೆ, ಡಿಕೆಶಿ ಆರೋಗ್ಯದಲ್ಲಿ ಏರುಪೇರು ಉಂಟಾದ್ದರಿಂದ ಅವರಿಗೆ ದೆಹಲಿಯ ರಾಮ್​ ಮನೋಹರ್​ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯ ಸ್ಥಿರವಾದ ಬಳಿಕ ಡಿಕೆಶಿ ಅವರನ್ನು ಪೊಲೀಸ್​ ಬಿಗಿ ಬಂದೋಬಸ್ತ್​ ಮೂಲಕ ಆಸ್ಪತ್ರೆಯಿಂದ ತಿಹಾರ್​ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಇಂದು ಜಾಮೀನು ಅರ್ಜಿ ವಜಾಗೊಂಡಿದ್ದರಿಂದ ಡಿಕೆಶಿ ಮತ್ತೆ ಜೈಲು ಪಾಲಾಗಿದ್ದಾರೆ.  

click me!