ಯಾಸಿನ್ ಭಟ್ಕಳ್ ಸಲ್ಲಿಸಿದ್ದ ಅರ್ಜಿಯ ತೀರ್ಪು ಕಾಯ್ದಿರಿಸಿದ ಪಟಿಯಾಲ ಕೋರ್ಟ್

By Suvarna Web DeskFirst Published Mar 7, 2017, 2:12 PM IST
Highlights

ತಿಹಾರ್ ಜೈಲಿನಲ್ಲಿ ಬಂಧನದಲ್ಲಿರುವ ಮುಜಾಹಿದ್ದೀನ್ ಸಹ ಸಂಸ್ಥಾಪಕ ಯಾಸೀನ್ ಭಟ್ಕಳ್ ತಮ್ಮ ಒಬ್ಬಂಟಿತನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ಪಟಿಯಾಲ ಹೌಸ್ ಕೋರ್ಟ್ ಕಾಯ್ದಿರಿಸಿದೆ.

ನವದೆಹಲಿ (ಮಾ.07): ತಿಹಾರ್ ಜೈಲಿನಲ್ಲಿ ಬಂಧನದಲ್ಲಿರುವ ಮುಜಾಹಿದ್ದೀನ್ ಸಹ ಸಂಸ್ಥಾಪಕ ಯಾಸೀನ್ ಭಟ್ಕಳ್ ತಮ್ಮ ಒಬ್ಬಂಟಿತನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ಪಟಿಯಾಲ ಹೌಸ್ ಕೋರ್ಟ್ ಕಾಯ್ದಿರಿಸಿದೆ.

ಜೈಲಿನ ಸೆಲ್ ನಲ್ಲಿ ಅವರು ಒಬ್ಬಂಟಿಯಾಗಿಲ್ಲ. ಅವರ ಮೇಲೆ ಸಾಕಷ್ಟು ಪ್ರಕರಣಗಳು ಬಾಕಿಯಿರುವುದರಿಂದ ಕಣ್ಗಾವಲಿನಲ್ಲಿ ಇಡಲಾಗಿದೆ ಎಂದು ತಿಹಾರ್ ಜೈಲು ಅಧಿಕಾರಿಗಳು ಕೋರ್ಟ್ ಗೆ ಹೇಳಿದ್ದಾರೆ.

2013 ರ ಹೈದರಾಬಾದ್ ಅವಳಿ ಸ್ಪೋಟದ ಅಪರಾಧಕ್ಕಾಗಿ ಯಾಸೀನ್ ಭಟ್ಕಳ್ ಸೇರಿದಂತೆ ನಾಲ್ವರಿಗೆ ಜೀವಾವಧಿ ಶಿಕ್ಷೆ ನೀಡಿದೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಬಿಗಿ ಭದ್ರತೆ ಇರುವ ಸೆಲ್ ನಲ್ಲಿ ತನ್ನನ್ನು ಇಡಬಾರದು ಎಂದು ಯಾಸಿನ್ ಆರೋಪಿಸಿದ್ದಾರೆ.

click me!