ಎಲ್ಎನ್ ಜಿಯನ್ನು ಸಾರಿಗೆ ಇಂಧನವಾಗಿ ಬಳಸಲು ಸರ್ಕಾರ ಚಿಂತನೆ: ಧರ್ಮೆಂದ್ರ ಪ್ರಧಾನ್

By Suvarna Web DeskFirst Published Mar 7, 2017, 12:31 PM IST
Highlights

ಎಲ್ ಎನ್ ಜಿ ಯನ್ನು (ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್) ಸಾರಿಗೆ ಇಂಧನವಾಗಿ ಬಳಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತೈಲ ಮತ್ತು ಇಂಧನ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ನವದೆಹಲಿ (ಮಾ.07): ಎಲ್ ಎನ್ ಜಿ ಯನ್ನು (ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್) ಸಾರಿಗೆ ಇಂಧನವಾಗಿ ಬಳಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತೈಲ ಮತ್ತು ಇಂಧನ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಸಾರ್ವಜನಿಕ ವಲಯದ ತೈಲ ಮತ್ತು ಅನಿಲ ಕಂಪನಿಗಳ ಸಿಇಒ ಸೇರಿದಂತೆ ಧರ್ಮೆಂದ್ರ ಪ್ರಧಾನ್ ಹೌಸ್ಟನ್ ಭೇಟಿ ನೀಡಿ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ “ ಭಾರತವು ಎಲ್ ಎನ್ ಜಿಯನ್ನ ಸಾರಿಗೆ ಇಂಧನವಾಗಿ ಬಳಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಶೀಘ್ರದಲ್ಲೇ ತಿಳಿಸುತ್ತೇವೆ ಎಂದು ಹೇಳಿದ್ದಾರೆ.

 

click me!