ಮಗಳ ಕಿಡ್ನ್ಯಾಪ್ ಮಾಡ್ತಿವಿ: ಕೇಜ್ರಿಗೆ ಇ-ಮೇಲ್ ಬೆದರಿಕೆ!

By Web DeskFirst Published Jan 13, 2019, 11:27 AM IST
Highlights

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಬೆದರಿಕೆ ಇ-ಮೇಲ್| ಮಗಳನ್ನು ಕಿಟ್ನ್ಯಾಪ್ ಮಾಡೋದಾಗಿ ಬೆದರಿಕೆ| ಆತಂಕ ಸೃಷ್ಟಿಸಿದ ಅನಾಮಿಕ ಇ-ಮೇಲ್ ಬೆದರಿಕೆ| ಕೇಜ್ರಿ ಪುತ್ರಿಗೆ ಭದ್ರತೆ ಹೆಚ್ಚಿಸಿದ ಪೊಲೀಸರು| ಇ-ಮೇಲ್ ಮೂಲ ಪತ್ತೆ ಹಚ್ಚಲು ಪೊಲೀಸರಿಂದ ತನಿಖೆ ಆರಂಭ 

ನವದೆಹಲಿ(ಜ.13): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿಯನ್ನು ಅಪಹರಿಸುವುದಾಗಿ ಬೆದರಿಕೆ ಪತ್ರ ಬಂದಿದ್ದು, ಕೇಜ್ರಿ ಪುತ್ರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಕೇಜ್ರಿವಾಲ್ ಕಚೇರಿಗೆ ಬಂದಿರುವ ಅನಾಮಿಕ ಇ- ಮೇಲ್ ನಲ್ಲಿ  ಪುತ್ರಿಯನ್ನು ಅಪಹರಿಸುವುದಾಗಿ ಬೆದರಿಕೆ ಹಾಕಲಾಗಿದೆ. ಕಳೆದ ಜ.9 ರಂದು ಬಂದಿರುವ ಬೆದರಿಕೆ ಇ- ಮೇಲ್ ದೆಹಲಿಯ ಪೊಲೀಸ್ ಆಯುಕ್ತ ಅಮೂಲ್ಯ ಪಾಟ್ನಯಕ್ ಅವರಿಗೆ ವರ್ಗಾಯಿಸಲಾಗಿದೆ.

Delhi Chief Minister's Office received an anonymous mail on January 9 that threatened to kidnap CM Arvind Kejriwal's daughter. Delhi Police has deployed a Protective Service Officer (PSO) for CM's daughter & the matter has been handed over to Cyber cell. pic.twitter.com/Jy9PJaRF9k

— ANI (@ANI)

ಬೆದರಿಕೆ ಇ-ಮೇಲ್ ಬಂದಿರುವುದನ್ನು ದೆಹಲಿ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದು, ಅದನ್ನು ಸೈಬರ್ ವಿಭಾಗದ ವಿಶೇಷ ಘಟಕ್ಕೆ ವರ್ಗಾಯಿಸಲಾಗಿದೆ. ಯಾವ ಇ- ಮೇಲ್ ಖಾತೆಯಿಂದ ಈ ಕರೆ ಬಂದಿದೆ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 

click me!