ಅಭಿನಂದನ್ ಭೇಟಿಯಾದ ರಕ್ಷಣಾ ಸಚಿವೆ: ದೇಶವಾಸಿಯ ಉಸಿರಲ್ಲಿ ನೀ ಇರುವೆ!

By Web DeskFirst Published Mar 2, 2019, 4:48 PM IST
Highlights

ಪಾಕ್ ಕಪಿಮುಷ್ಠಿಯಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿದ ವಿಂಗ್ ಕಮಾಂಡರ್| ನವದೆಹಲಿಯ ಆಸ್ಪತ್ರೆಯಲ್ಲಿ ಅಭಿನಂದನ್ ಭೇಟಿ ಮಾಡಿದ ರಕ್ಷಣಾ ಸಚಿವೆ| ವಾಯುಸೇನೆ ಅಧಿಕಾರಿಯ ಆರೋಗ್ಯ ವಿಚಾರಿಸಿದ ನಿರ್ಮಲಾ ಸೀತಾರಾಮನ್| ವಾಯುಸೇನಾ ಮುಖ್ಯಸ್ಥರನ್ನು ಭೇಟಿಯಾದ ವಿಂಗ್ ಕಮಾಂಡರ್ ಅಭಿನಂದನ್|

ನವದೆಹಲಿ(ಮಾ.02): ಪಾಕ್ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಈ ಮಧ್ಯೆ ನವದೆಹಲಿಯಲ್ಲಿ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ಅಭಿನಂದನ್ ಅವರನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

: Defence Minister Nirmala Sitharaman met Wing Commander Abhinandan Varthman at a hospital in Delhi today. pic.twitter.com/WD927TQHOV

— ANI (@ANI)

ವಾಯುಸೇನಾ ಅಧಿಕಾರಿಗಳೊಂದಿಗೆ ಆಸ್ಪತ್ರೆ ಆಗಮಿಸಿದ ನಿರ್ಮಲಾ ಸೀತಾರಾಮನ್ ವಿಂಗ್ ಕಮಾಂಡರ್ ಅಭಿನಂದನ್ ಅವರ ಆರೋಗ್ಯ ವಿಚಾರಿಸಿದರು. ಆದರೆ ಇಬ್ಬರ ನಡುವೆ ಏನೆನು ಮಾತುಕತೆ ನಡೆಯಿತು ಎಂಬ ವಿವರ ಇನ್ನಷ್ಟೇ ಹೊರ ಬೀಳಬೇಕಿದೆ.

Delhi: Defence Minister Nirmala Sitharaman met Wing Commander Abhinandan Varthman in a hospital today. pic.twitter.com/fnli7ZQTlH

— ANI (@ANI)

ಈ ಮಧ್ಯೆ ವಾಯುಸೇನಾ ಮುಖ್ಯಸ್ಥ ಬಿಎಸ್ ಧನೋಹಾ ಅವರನ್ನೂ ಭೇಟಿಯಾಗಿರುವ ವಿಂಗ್ ಕಮಾಂಡರ್ ಅಭಿನಂದನ್, ಪಾಕಿಸ್ತಾನದಲ್ಲಿ ಸೆರೆ ಸಿಕ್ಕ ಘಟನೆಯ ಕುರಿತು ಸಂಪೂರ್ಣ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.

According to IAF officials, Wing Commander Abhinandan Varthaman (in file pic) met IAF Chief BS Dhanoa today morning and explained his detention in Pakistan. The Wing Commander will stay at Air Force Officer's Mess. pic.twitter.com/zMlfpKokff

— ANI (@ANI)
click me!