'44ಯೋಧರನ್ನ ಬಲಿಕೊಟ್ಟು, 22 ಸ್ಥಾನ ಗೆಲ್ಲುವುದು ಬಿಜೆಪಿಯ ಸ್ಟ್ರಾಟಜಿ'

Published : Mar 02, 2019, 04:01 PM ISTUpdated : Mar 02, 2019, 04:16 PM IST
'44ಯೋಧರನ್ನ ಬಲಿಕೊಟ್ಟು, 22 ಸ್ಥಾನ ಗೆಲ್ಲುವುದು ಬಿಜೆಪಿಯ  ಸ್ಟ್ರಾಟಜಿ'

ಸಾರಾಂಶ

 ಭಾರತೀಯ ವಾಯುಸೇನೆಯು ಉಗ್ರರ ನೆಲೆಯನ್ನು ಧ್ವಂಸಗೊಳಿಸಿರುವುದನ್ನ ರಾಜಕೀಯವಾಗಿ ಬಳಸಿಕೊಂಡ ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್.ಯಡಿಯೂರಪ್ಪಗೆ ಛೀಮಾರಿ ಹಾಕುತ್ತಿದ್ದಾರೆ.

ಚಾಮರಾಜನಗರ, (ಮಾ.02): 44ಯೋಧರನ್ನ ಬಲಿಕೊಟ್ಟು, 22 ಸ್ಥಾನ ಗೆಲ್ಲುವುದು  ಬಿಜೆಪಿಯವರ  ಮನಸ್ಸಿನಲ್ಲಿತ್ತು. ಇದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ  ಮೂಲಕ ಅದು ಬೆಳಕಿಗೆ ಬಂದಿದೆ ಎಂದು ಸಮಾಜ ಕಲ್ಯಾಣ ಸಚಿವ  ಪ್ರಿಯಾಂಕ ಖರ್ಗೆ ಲೇವಡಿ ಮಾಡಿದ್ದಾರೆ.

"

#AirStrike ನಿಂದ ಬಿಜೆಪಿಗೆ 22 ಸೀಟು ಖಚಿತ: ಯಡಿಯೂರಪ್ಪಗೆ ಛೀಮಾರಿ

(ಇಂದು) ಶನಿವಾರ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟಕ್ಕೆ  ವಿವಿಧ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಭಾಗವಹಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಆಪರೇಷನ್ ಕಮಲ ಮಾಡಿದ್ದು ಬಹಿರಂಗವಾಗಿದೆ.

 ಬಿ.ಎಸ್. ಯಡಿಯೂರಪ್ಪ ರವರು ಸ್ಪೀಕರ್, ಜಡ್ಜಗಳನ್ನ ಬುಕ್ ಮಾಡಿದ್ದೇವೆ  ಎಂಬ ಆಡಿಯೋದಲ್ಲಿದ್ದ ಧ್ವನಿ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಈ ಎಲ್ಲಾ ಷಡ್ಯಂತ್ರಗಳನ್ನ ಚುನಾವಣೆ ಸಮೀಪದಲ್ಲಿ  ಮಾಡ್ತಾ ಇದ್ದಾರೆ ಎಂದು ಆರೋಪಿಸಿದರು.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆಲ್ಮೆಟ್ ಇಲ್ಲದ ಬೈಕ್ ಸವಾರನ ಹಿಡಿದ ಪೊಲೀಸ್, ಒಂದೇ ಮಾತಿಗೆ ದಂಡ ವಿಧಿಸದೆ ಬಿಟ್ಟುಕಳುಹಿಸಿದ್ರು
ಗ್ರೀನ್ ಕಾರ್ಡ್ ಸಂದರ್ಶನದ ವೇಳೆ 30 ವರ್ಷಗಳಿಂದ ಅಮೆರಿಕಾದಲ್ಲಿ ವಾಸವಿದ್ದ ಭಾರತೀಯ ಮಹಿಳೆಯ ಬಂಧನ