ಉಮಾಭಾರತಿ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ

By Web DeskFirst Published Sep 29, 2016, 4:02 PM IST
Highlights

ಭೂಪಾಲ್ (ಸೆ.29): 13 ವರ್ಷಗಳ ಹಿಂದೆ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ಹಾಜರಾಗಲಿಲ್ಲವೆಂದು ಉಮಾ ಭಾರತಿ ಮೇಲೆ ಸ್ಥಳಿಯ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ.

ಮುಖ್ಯ ನ್ಯಾಯಾಧೀಶ ಭೂಭಾಸ್ಕರ್ ಉಮಾ ಭಾರತಿ ವಿರುದ್ಧ ಬಂಧನ ಆಜ್ಞೆ ಹೊರಡಿಸಿ ಎಂದು ಹಿರಿಯ ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು. ಆಗ ಉಮಾಭಾರತಿ ಪರ ವಕೀಲ ಹರೀಶ್ ಮೆಹ್ತಾ ಇಂದು ಕರ್ನಾಟಕ ಮತ್ತು ತಮಿಳುನಾಡು ನಡುವೆ ಎದ್ದಿರುವ ಕಾವೇರಿ ವಿವಾದದ ಸಂಧಾನ ಸಭೆಯಲ್ಲಿ ಉಮಾಭಾರತಿ ಬ್ಯುಸಿಯಾಗಿದ್ದರು. ಹಾಗಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದ್ದರಿಂದ ವಿನಾಯಿತಿ ನೀಡಬೇಕೆಂದು ಕೇಳಿಕೊಂಡಿದ್ದಾರೆ.

click me!