ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ: ಜೆಡಿಯು

By Suvarna Web DeskFirst Published May 27, 2017, 2:03 PM IST
Highlights

ಕೇಂದ್ರ ಸರ್ಕಾರಕ್ಕೆ ಗೋವಿನ ಮೇಲೆ ಅಷ್ಟೊಂದು ಪ್ರೀತಿಯಿದ್ದರೆ, ಅದನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಲಿ ಎಂದು ಜೆಡಿಯು ನಾಯಕ ನೀರಜ್ ಕುಮಾರ್ ಹೇಳಿದ್ದಾರೆ.

ಪಾಟ್ನಾ: ಗೋವುಗಳ ಮಾರಾಟ ಹಾಗೂ ಹತ್ಯೆಗೆ ಸಂಬಂಧಿಸಿ ಕೇಂದ್ರ ಸರ್ಕಾರ ಹೊಸ ಅಧಿಸೂಚನೆ ಹೊರಡಿಸಿರುವ ಬೆನ್ನಲ್ಲಿ, ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಲು ಜನತಾದಳ ಯುನೈಟೆಡ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಕೇಂದ್ರ ಸರ್ಕಾರಕ್ಕೆ ಗೋವಿನ ಮೇಲೆ ಅಷ್ಟೊಂದು ಪ್ರೀತಿಯಿದ್ದರೆ, ಅದನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಲಿ ಎಂದು ಜೆಡಿಯು ನಾಯಕ ನೀರಜ್ ಕುಮಾರ್ ಹೇಳಿದ್ದಾರೆ.

ಕೇಂದ್ರದ ಅಧಿಸೂಚನೆ ಪ್ರಕಾರ, ಪರವಾನಿಗೆ ಪಡೆದ ಬ್ರೀಡರ್'ಗಳನ್ನು ಹೊರತುಪಡಿಸಿ ಬೇರಾರೂ ಕೂಡ ಗೋವಧಾ ಕೇಂದ್ರಗಳಿಗೆ ದನಗಳನ್ನು ಮಾರಾಟ ಮಾಡುವಂತಿಲ್ಲ. ಅಷ್ಟೇ ಅಲ್ಲ ದನಗಳ ಮಾರಾಟಕ್ಕೂ ಕೇಂದ್ರ ಕಡಿವಾಣ ಹಾಕಿದೆ. ಜಮೀನು ಹೊಂದಿರುವ ರೈತರು ಮಾತ್ರ ದನಗಳ ಮಾರಾಟ ಮಾಡಬಹುದಾಗಿದೆ.

click me!