ತಮಿಳರ ಪಾಲಿಗೆ ‘ಕರಾಳ ಡಿಸೆಂಬರ್ ’ ಮತ್ತೆ ಮತ್ತೆ ಸಾಬೀತು!

Published : Dec 06, 2016, 04:12 AM ISTUpdated : Apr 11, 2018, 12:56 PM IST
ತಮಿಳರ ಪಾಲಿಗೆ ‘ಕರಾಳ ಡಿಸೆಂಬರ್ ’ ಮತ್ತೆ ಮತ್ತೆ ಸಾಬೀತು!

ಸಾರಾಂಶ

ದ್ರಾವಿಡ ಚಳವಳಿಯ ನಾಯಕ ಪೆರಿಯಾರ್ ರಾಮಸ್ವಾಮಿ, 1973, ಡಿಸೆಂಬರ್ 24ರಂದು ಕೊನೆಯುಸಿರೆಳೆದರು. ಜಯಲಲಿತಾ ರಾಜಕೀಯ ಗುರು ಎಂಜಿಆರ್ ರಾಮಚಂದ್ರನ್​ ಮೃತಪಟ್ಟಿದ್ದೂ ಸಹ 1987ರ ಡಿಸೆಂಬರ್ 24ರಂದು. ಇದಲ್ಲದೇ, 2004ರಲ್ಲಿ ಚೆನ್ನೈನಲ್ಲಿ ನೂರಾರು ಮಂದಿಯ ಸಾವು-ನೋವಿಗೆ ಕಾರಣವಾದ ಮೃತ್ಯು ಸ್ವರೂಪಿ ಸುನಾಮಿ ಅಪ್ಪಳಿಸಿದ್ದೂ ಡಿಸೆಂಬರ್ 26ರಂದು. ಇನ್ನು  ಭಾರಿ ಮಳೆಯಿಂದಾಗಿ ಚಿನ್ನೈ ಪ್ರವಾಹ ಪರಿಸ್ಥಿತಿ ಎದುರಿಸಿದ್ದೂ ಕಳೆದ ವರ್ಷ ಡಿಸೆಂಬರ್ 14ರಂದು.

ಚೆನ್ನೈ(ಡಿ.06):ಜಯಲಲಿತಾ ಸಾವಿನೊಂದಿಗೆ ತಮಿಳರ ಪಾಲಿಗೆ ಡಿಸೆಂಬರ್ ಕರಾಳ ತಿಂಗಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮದ್ರಾಸ್  ಪ್ರಾಂತ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಗೃಹ ಸಚಿವರಾಗಿದ್ದ ಸಿ. ರಾಜಗೋಪಾಲಚಾರಿ ಮೃತಪಟ್ಟಿದ್ದು 1972, ಡಿಸೆಂಬರ್ 25ರಂದು.

ಅದೇ ರೀತಿ, ದ್ರಾವಿಡ ಚಳವಳಿಯ ನಾಯಕ ಪೆರಿಯಾರ್ ರಾಮಸ್ವಾಮಿ, 1973, ಡಿಸೆಂಬರ್ 24ರಂದು ಕೊನೆಯುಸಿರೆಳೆದರು. ಜಯಲಲಿತಾ ರಾಜಕೀಯ ಗುರು ಎಂಜಿಆರ್ ರಾಮಚಂದ್ರನ್​ ಮೃತಪಟ್ಟಿದ್ದೂ ಸಹ 1987ರ ಡಿಸೆಂಬರ್ 24ರಂದು. ಇದಲ್ಲದೇ, 2004ರಲ್ಲಿ ಚೆನ್ನೈನಲ್ಲಿ ನೂರಾರು ಮಂದಿಯ ಸಾವು-ನೋವಿಗೆ ಕಾರಣವಾದ ಮೃತ್ಯು ಸ್ವರೂಪಿ ಸುನಾಮಿ ಅಪ್ಪಳಿಸಿದ್ದೂ ಡಿಸೆಂಬರ್ 26ರಂದು. ಇನ್ನು  ಭಾರಿ ಮಳೆಯಿಂದಾಗಿ ಚಿನ್ನೈ ಪ್ರವಾಹ ಪರಿಸ್ಥಿತಿ ಎದುರಿಸಿದ್ದೂ ಕಳೆದ ವರ್ಷ ಡಿಸೆಂಬರ್ 14ರಂದು.

ಇದೀಗ, ತಮಿಳರ ಆರಾಧ್ಯ ದೈವ ಜಯಲಲಿತಾ ನಿಧನ, ತಮಿಳರ ಪಾಲಿಗೆ ಡಿಸೆಂಬರ್​ ಶೋಕಸಾಗರದಲ್ಲಿ ಮುಳುಗಿಸಿದೆ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗುಜರಾತ್‌ಗೆ ಬರುತ್ತಿದ್ದ ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ದಾಳಿ; ಪ್ರಚೋದನಕಾರಿ ಕೃತ್ಯಕ್ಕೆ ಭಾರತ ತೀವ್ರ ಖಂಡನೆ!
ರುದ್ರಾಕ್ಷಿ ಮಾರುವ ಹುಡುಗಿ ಮೊನಾಲಿಸಾ, ಮುಸ್ಲಿಂ ಯುವಕನ ಮದುವೆಯಾಗಲು ಕೇರಳವನ್ನೇ ಆಯ್ಕೆ ಮಾಡಿದ್ದೇಕೆ? ಕಾರಣ ರಿವೀಲ್!