'ಊಟ ಹಾಗೂ ಸ್ನಾನದಂತೆ ಸೆಕ್ಸ್‌ ಕೂಡ ದೈನಂದಿನ ಜೀವನದ ಅಂಗ'

By Web DeskFirst Published Sep 14, 2019, 8:46 AM IST
Highlights

'ಊಟ ಹಾಗೂ ಸ್ನಾನದಂತೆ ಸೆಕ್ಸ್‌ ಕೂಡ ದೈನಂದಿನ ಜೀವನದ ಅಂಗ'| ಸೆಕ್ಸ್‌ ವೇಳೆ ಮೃತಪಟ್ಟವನಿಗೆ ಅಚ್ಚರಿಯ ಪರಿಹಾರ!!| ಫ್ರಾನ್ಸ್‌ ಕೋರ್ಟ್‌ನಿಂದ ಅಚ್ಚರಿಯ ತೀರ್ಪು

ಪ್ಯಾರಿಸ್‌[ಸೆ.14]:  ಕಂಪನಿ ಕೆಲಸದ ನಿಮಿತ್ತ ಅನ್ಯ ಸ್ಥಳಕ್ಕೆ ತೆರಳಿದ್ದ ಫ್ರೆಂಚ್‌ ಮೂಲದ ಸಿಬ್ಬಂದಿಯೋರ್ವ ಸೆಕ್ಸ್‌ ವೇಳೆ ಹೃದಯಾಘಾತಗೊಂಡು ಮೃತಪಟ್ಟಿದ್ದು, ಪ್ರಕರಣವನ್ನು ಕೆಲಸದ ವೇಳೆ ನಡೆದ ದುರಂತ ಎಂದು ಪರಿಗಣಿಸಿ ನ್ಯಾಯಾಲಯ ಪರಿಹಾರಕ್ಕೆ ಸೂಚನೆ ನೀಡಿದ ಅಪರೂಪ ಘಟನೆ ನಡೆದಿದೆ.

2013ರಲ್ಲಿ ಖಾಸಗಿ ರೈಲ್ವೇ ಕಂಪನಿಯ ಉದ್ಯೋಗಿ ಎಂ ಕ್ಸೇವಿಯರ್‌ ಎಂಬಾತ ಕಂಪನಿ ಕೆಲಸದ ನಿಮಿತ್ತ ಲೋರಿಹಿಟ್‌ ಪ್ರದೇಶಕ್ಕೆ ತೆರಳಿದ್ದ, ಅಲ್ಲಿ ಸೆಕ್ಸ್‌ನಲ್ಲಿ ತೊಡಗಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ.

ಲೈಂಗಿಕ ಚಟುವಟಿಕೆ ವ್ಯಾಯಾಮಕ್ಕೆ ಬದಲಿಯಾಗುತ್ತಾ?

ಕರ್ತವ್ಯದ ವೇಳೆ ಘಟನೆ ನಡೆದಿದ್ದರಿಂದ ಪರಿಹಾರ ಕೋರಿ ಕ್ಸೇವಿಯರ್‌ ಸಂಬಂಧಿಕರು ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ಇದನ್ನು ವಿರೋಧಿಸಿದ್ದ ಕಂಪನಿ, ಸೆಕ್ಸ್‌ ಕಂಪನಿ ಕೆಲಸದ ಭಾಗವಲ್ಲ. ಅಲ್ಲದೇ ಆತನಿಗೆ ನೀಡಲಾದ ಹೋಟೆಲ್‌ ಬಿಟ್ಟು ಬೇರೆ ಹೋಟೆಲ್‌ನಲ್ಲಿ ತಂಗಿ, ಅಪರಿಚಿತರೊಂದಿಗೆ ಲೈಂಗಿಕ ಕ್ರೀಯೆ ನಡೆಸಿದ್ದಾನೆ. ಹಾಗಾಗಿ ಇದನ್ನು ಕೆಲಸದ ವೇಳೆ ನಡೆದ ದುರಂತ ಎಂದು ಪರಿಗಣಿಸಬಾರದು ಎಂದು ಕಂಪನಿ ವಾದ ಮಂಡಿಸಿತ್ತು.

ಅಯ್ಯೋ ಪಾಪ.. ಅಜ್ಜಿಯ ಕಾಲುಚೀಲಗಳಾದ ಮೊಮ್ಮಗನ ಸೆಕ್ಸ್ ಟಾಯ್ಸ್!

ಆದರೆ ಕಂಪನಿಯ ವಾದವನ್ನು ತಳ್ಳಿ ಹಾಕಿದ ಪ್ಯಾರಿಸ್‌ ನ್ಯಾಯಾಲಯ, ಬ್ಯುಸಿನೆಸ್‌ ಟ್ರಿಪ್‌ ವೇಳೆ ಘಟನೆ ಈ ಘಟನೆ ನಡೆದಿದೆ. ಕೆಲಸದ ಸಮಯ ಅಥವಾ ವೈಯಕ್ತಿಕ ಸಮಯದ ವೇಳೆ ಈ ಘಟನೆ ಸಂಭವಿಸಿದೆ ಎನ್ನುವ ವಾದ ಅಪ್ರಸ್ತುತ. ಊಟ ಹಾಗೂ ಸ್ನಾನದಂತೆ ಸೆಕ್ಸ್‌ ಕೂಡ ದೈನಂದಿನ ಜೀವನದ ಅಂಗ ಎಂದು ಪರಿಗಣಿಸಿ ಆತನ ಕುಟುಂಬಸ್ಥರಿಗೆ ಪರಿಹಾರ ನೀಡಲು ನ್ಯಾಯಾಲಯ ಆದೇಶ ನೀಡಿದೆ. ಪ್ರಕರಣದ ಆದೇಶ ಪ್ರತಿಯನ್ನು ಕ್ಸೇವಿಯರ್‌ ಪರ ನ್ಯಾಯಾಧೀಶ ಸರಾಹ್‌ ಬಾಲ್ವೆಟ್‌ ಲಿಂಕ್‌್ಡ ಇನ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

click me!