ಹೊಸ ಲೋಗೋ ಸೂಚಿಸಲು ದೂರದರ್ಶನದಿಂದ ಸಾರ್ವಜನಿಕರಿಗೆ ಆಹ್ವಾನ

By Suvarna Web DeskFirst Published Jul 25, 2017, 6:16 PM IST
Highlights

ಹೊಸ ಪೀಳಿಗೆಯ ಜನರನ್ನು ಆಕರ್ಷಿಸುವುದಕ್ಕೆ ದೂರದರ್ಶನ ತನ್ನ ಸಾಂಪ್ರದಾಯಿಕ ಲೋಗೋವನ್ನು ಬದಲಾಯಿಸಿ ಹೊಸ ಲೋಗೋವನ್ನು ಸೃಷ್ಟಿಸಲಿದೆ. ಹೊಸ ವಿನ್ಯಾಸದೊಂದಿಗಿನ ಲೋಗೋವನ್ನು ಸೂಚಿಸಲು ದೂರದರ್ಶನ ಸಾರ್ವಜನಿಕರಿಗೆ ಆಹ್ವಾನ ನೀಡಿದೆ.

ನವದೆಹಲಿ (ಜು.25): ಹೊಸ ಪೀಳಿಗೆಯ ಜನರನ್ನು ಆಕರ್ಷಿಸುವುದಕ್ಕೆ ದೂರದರ್ಶನ ತನ್ನ ಸಾಂಪ್ರದಾಯಿಕ ಲೋಗೋವನ್ನು ಬದಲಾಯಿಸಿ ಹೊಸ ಲೋಗೋವನ್ನು ಸೃಷ್ಟಿಸಲಿದೆ. ಹೊಸ ವಿನ್ಯಾಸದೊಂದಿಗಿನ ಲೋಗೋವನ್ನು ಸೂಚಿಸಲು ದೂರದರ್ಶನ ಸಾರ್ವಜನಿಕರಿಗೆ ಆಹ್ವಾನ ನೀಡಿದೆ.

ದೇಶದ ಜನಸಂಖ್ಯೆಯಲ್ಲಿ ಹೆಚ್ಚಿನ ಜನ 30 ವರ್ಷದೊಳಗಿನವರು. ಇವರು ದೂರದರ್ಶನವನ್ನು ನೋಡಿ ಬೆಳೆದವರಲ್ಲ. ಹಿಂದಿನ ಪೀಳಿಗೆಯವರಂತೆ ದೂರದರ್ಶನದೊಂದಿಗೆ ಅಷ್ಟಾಗಿ ಬಾಲ್ಯದ ನೆನಪುಗಳನ್ನು ಹಂಚಿಕೊಂಡವರಲ್ಲ. ಯುವಜನತೆಯನ್ನು ಹೆಚ್ಚು ಆಕರ್ಷಿಸಲು, ದೂರದರ್ಶನವನ್ನು ಯುವಜನತೆಗೆ ಹೆಚ್ಚು ಪ್ರಸ್ತುತವೆನಿಸಲು ಲೋಗೋವನ್ನು ಬದಲಾಯಿಸಲಿದ್ದೇವೆ ಎಂದು ಪ್ರಸಾರ ಭಾರತಿಯ ಮುಖ್ಯ ನಿರ್ವಹಣಾಧಿಕಾರಿ ಶಶಿಶೇಖರ್ ವೆಂಪಟ್ಟಿ ಹೇಳಿದ್ದಾರೆ.

1959 ರಿಂದ ದೂರದರ್ಶನ ಒಂದೇ ಲೋಗೋವನ್ನು ಹೊಂದಿದೆ. ಇದು ಮನುಷ್ಯನ ಕಣ್ಣನ್ನು ಸಂಕೇತಿಸುತ್ತದೆ.

click me!