ನೋಟು ಅಮಾನ್ಯದಿಂದ ಭಯೋತ್ಪಾದನೆ ಮೇಲೆ ಭಾರೀ ಪರಿಣಾಮ: ಕೇಂದ್ರ

By Suvarna Web DeskFirst Published Jul 25, 2017, 6:15 PM IST
Highlights

ಕಾನೂನುಬಾಹಿರವಾಗಿ ಸಂಗ್ರಹಿಸಿಟ್ಟಿದ್ದ ಹಣವು ಭಯೋತ್ಪಾದನೆ ಬಳಕೆಯಾಗುತ್ತಿತ್ತು. ನೋಟು ಅಮಾನ್ಯ ಕ್ರಮದಿಂದ ಉಗ್ರರ ಬಳಿಯಿದ್ದ ಹಣವು ವ್ಯರ್ಥವಾಗಿದೆ. ನೋಟು ಅಮಾನ್ಯ ಕ್ರಮದಿಂದ ಪಾಕಿಸ್ತಾನದಿಂದ ಮುದ್ರಣಗೊಳ್ಳೂತ್ತಿದ್ದ ನಕಲಿ ನೋಟುಗಳಿಗೆ ಹಾಗೂ ಹವಾಲಾ ದಂಧೆಗೆ ಕಡಿವಾಣ ಬಿದ್ದಿದೆ, ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಆಹಿರ್ ಹೇಳಿದ್ದಾರೆ.

ನವದೆಹಲಿ: ನೋಟು ಅಮಾನ್ಯ ಕ್ರಮವು ಭಯೋತ್ಪಾದನೆ ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಆಹಿರ್ ಹೇಳಿದ್ದಾರೆ.

ಕಾನೂನುಬಾಹಿರವಾಗಿ ಸಂಗ್ರಹಿಸಿಟ್ಟಿದ್ದ ಹಣವು ಭಯೋತ್ಪಾದನೆ ಬಳಕೆಯಾಗುತ್ತಿತ್ತು. ನೋಟು ಅಮಾನ್ಯ ಕ್ರಮದಿಂದ ಉಗ್ರರ ಬಳಿಯಿದ್ದ ಹಣವು ವ್ಯರ್ಥವಾಗಿದೆ. ನೋಟು ಅಮಾನ್ಯ ಕ್ರಮದಿಂದ ಪಾಕಿಸ್ತಾನದಿಂದ ಮುದ್ರಣಗೊಳ್ಳೂತ್ತಿದ್ದ ನಕಲಿ ನೋಟುಗಳಿಗೆ ಹಾಗೂ ಹವಾಲಾ ದಂಧೆಗೆ ಕಡಿವಾಣ ಬಿದ್ದಿದೆ, ಎಂದು ಹಂಸರಾಜ್ ಗಂಗಾರಾಮ್ ಆಹಿರ್ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಮಾಹಿತಿ ಪ್ರಕಾರ ಜಮ್ಮು & ಕಾಶ್ಮೀರದಲ್ಲಿ ನೋಟು ಅಮಾನ್ಯ ಕ್ರಮದ ಬಳಿಕ (9 ನವಂಬರ್ 2016 ರಿಂದ 14 ಜುಲೈ 2017) ಒಟ್ಟು ರೂ. 260 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ, ಎಂದು ಅವರು ತಿಳಿಸಿದ್ದಾರೆ.

ಅವುಗಳಲ್ಲಿ ರೂ. 2000ದ 98 ನೋಟುಗಳು, ಹಳೆಯ ರೂ. 500ರ 60 ಹಾಗೂ ಹೊಸ ರೂ.500ರ 68 ನೋಟುಗಳು ಇವೆ ಎಂದು ಅವರು ಹೇಳಿದ್ದಾರೆ.

 

click me!