ಸರ್ಕಾರಕ್ಕೆ ಕಾದಿದೆಯಾ ಕಂಟಕ : ಸಿಎಂ ವಿರುದ್ಧ ಡಿಸಿಎಂ ಗರಂ!

By Web DeskFirst Published Sep 16, 2018, 1:24 PM IST
Highlights

ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಉಪ ಮುಖ್ಯಮಂತ್ರಿ ಪರಮೇಶ್ವರ್ ಗರಂ ಆಗಿದ್ದಾರೆ. 20 ಐಪಿಎಸ್ ಅಧಿಕಾರಿಗಳನ್ನು ದಿಡೀರ್ ವರ್ಗಾವಣೆ ಮಾಡಲಾಗಿದ್ದು, ಈ ಸಂಬಂಧ ಇಬ್ಬರ ನಡುವೆ ಅಸಮಾಧಾನ ಸ್ಫೋಟವಾಗಿದೆ.

ಬೆಂಗಳೂರು :   ಐಪಿಎಸ್ ಆಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಉಪ ಮುಖ್ಯಮಂತ್ರಿ ಪರಮೇಶ್ವರ್ ಗರಂ ಆಗಿದ್ದಾರೆ. 

20 ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಈ ಸಂಬಂಧ ಇಬ್ಬರ ನಡುವೆ ಅಸಮಾಧಾನ ಸ್ಫೋಟವಾಗಿದೆ. ನನ್ನ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ ಎಂದು ವರ್ಗಾವಣೆ ಬಳಿಕ ತಮ್ಮನ್ನು ಭೇಟಿಯಾದ ಆಪ್ತ ಅಧಿಕಾರಿಗಳ ಬಳಿ ಡಿಸಿಎಂ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 

ನನಗೆ ಹೇಳಿದ್ದರೆ, ನಾನು ಬೇಡ ಎನ್ನುತ್ತಿದ್ದೆನಾ ಎಂದು ಆಪ್ತ ಅಧಿಕಾರಿಗಳ ಬಳಿ ಸಿಎಂ ವಿರುದ್ಧ ಡಿಸಿಎಂ ಪರಮೇಶ್ವರ್ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಇದೇ ವೇಳೆ ಅಲೋಕ್ ಕುಮಾರ್ ವಿರುದ್ಧದ ಅಸಮಾಧಾನವೂ ಕೂಡ ಬಹಿರಂಗವಾಗಿದೆ. 

ಇನ್ಸ್ ಪೆಕ್ಟರ್ ಗಳ ಟ್ರಾನ್ಸ್ ಫರ್ ರೇವಣ್ಣ ಮಾಡ್ತಾನೆ. ಐಪಿಎಸ್ ಗಳ ಟ್ರಾನ್ಸ್ ಫರ್ ತಮ್ಮ ಮಾಡುತ್ತಾನೆ ಎಂದಿದ್ದು, ಸಿದ್ದರಾಮಯ್ಯ ಆಗಮನದ ಬಳಿಕ ಸಿಎಂ ಮತ್ತು ರೇವಣ್ಣ ವಿರುದ್ದ ದೂರು ಕೊಡಲು ಡಿಸಿಎಂ ಮುಂದಾಗಿದ್ದಾರೆ ಎಂದು ಸುವರ್ಣ ನ್ಯೂಸ್ ಡಾಟ್ ಕಾಂ.ಗೆ ಖಚಿತ ಮಾಹಿತಿ ಲಭ್ಯವಾಗಿದೆ.

click me!