
ಗ್ಯಾಂಗ್ಟಕ್[ಆ.15]: ಸಿಕ್ಕಿಂ ಎಂಬ ಈಶಾನ್ಯದ ಪುಟ್ಟರಾಜ್ಯವನ್ನು ಬರೋಬ್ಬರಿ ಎರಡೂವರೆ ದಶಕಗಳ ಕಾಲ ಅಳಿದ್ದ ಸಿಕ್ಕಿಂ ಡೆಮೊಕ್ರಾಟಿಕ್ ಫ್ರಂಟ್ (ಎಸ್‌ಡಿಎಫ್) ಕೇವಲ ಎರಡೇ ದಿನದಲ್ಲಿ ಖಾಲಿ ಖಾಲಿಯಾಗಿದೆ. ಮಂಗಳವಾರಷ್ಟೇ ಪಕ್ಷದ 10 ಜನ ಶಾಸಕರು ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರಿದ್ದರು. ಇದಾದ ಮರುದಿನವೇ ಇಬ್ಬರು ಶಾಸಕರು ಪಕ್ಷ ತೊರೆದಿದ್ದು, ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್ಕೆಎಂ) ಪಕ್ಷಕ್ಕೆ ಸೇರಿದ್ದಾರೆ. ಅಲ್ಲಿಗೆ 13 ಶಾಸಕರ ಪೈಕಿ 12 ಮಂದಿ ಗುಳೆ ಹೋಗಿದ್ದು, ಪಕ್ಷದ ಅಧ್ಯಕ್ಷ ಹಾಗೂ 26 ವರ್ಷ ಸಿಕ್ಕಿಂನ ಮುಖ್ಯಮಂತ್ರಿಯಾಗಿದ್ದ ಪವನ್ ಕುಮಾರ್ ಚಾಮ್ಲಿಂಗ್ ಮಾತ್ರ ಪಕ್ಷದಲ್ಲಿ ಬಾಕಿಯಾಗಿದ್ದಾರೆ.
ನಾವು ಆಡಳಿರೂಢ ಎಸ್ಕೆಎಂನ ನೇತೃತ್ವ ಹಾಗೂ ಅಜೆಂಡಾಗಳನ್ನು ಒಪ್ಪಿಕೊಂಡು ಪಕ್ಷ ಸೇರಿದ್ದೇವೆ. ಸದ್ಯ ಸ್ಥಳೀಯರ ಹಿತಾಸಕ್ತಿಗಳನ್ನು ಎತ್ತಿ ಹಿಡಿಯಲು ಪ್ರಾದೇಶಿಕ ಪಕ್ಷವಾಗಿ ಎಸ್‌ಕೆಂ ಮಾತ್ರ ಉಳಿದಿದೆ. ಸೋಮವಾರ 10 ಮಂದಿ ಶಾಸಕರು ಬಿಜೆಪಿಗೆ ಸೇರಿದ್ದರು. ಹಾಗಾಗಿ ನಾವಿಬ್ಬರು ಮಾತುಕತೆ ನಡೆಸಿ ಎಸ್ಕೆಎಂ ಸೇರಿದ್ದೇವೆ ಎಂದು ಇಬ್ಬರು ಶಾಸಕರು ಹೇಳಿದ್ದಾರೆ. ಇವರಿಬ್ಬರ ಸೇರ್ಪಡೆಯಿಂದ ಶಾಸನ ಸಭೆಯಲ್ಲಿ ಎಸ್ಕೆಎಂ ಬಲ 18 ಕ್ಕೇರಿದೆ. ಈ ಕ್ಷಿಪ್ರ ಬೆಳವಣಿಗೆಯಿಂದ ಸಿಕ್ಕಿಂ ನಲ್ಲಿ ಒಂದೂ ಸೀಟು ಗೆಲ್ಲದ ಬಿಜೆಪಿ ಅತೀ ದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿದ್ದು, ಅಧೀಕೃತ ವಿರೋಧ ಪಕ್ಷವಾಗಿದ್ದ ಎಸ್‌ಡಿಎಫ್ ನ ಸಂಖ್ಯಾಬಲ ಕೇವಲ 1 ಕ್ಕೆ ಕುಸಿದಿದೆ.
ಒಂದೂ ಸ್ಥಾನ ಗೆಲ್ಲದ ಬಿಜೆಪಿಗೆ ಈಗ ವಿಪಕ್ಷ ಸ್ಥಾನಮಾನ!
ಒಟ್ಟು 32 ಸಂಖ್ಯಾಬಲ ಇರುವ ಇರುವ ಸಿಕ್ಕಿ ವಿಧಾನ ಸಭೆಗೆ, ಕಳೆದ ಮೇನಲ್ಲಿ ನಡೆದ ಚುನಾವಣೆಯಲ್ಲಿ ಎಸ್ಕೆಎಂ 17 ಹಾಗೂ ಎಸ್‌ಡಿಎಫ್ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಎಸ್‌ಡಿಎಫ್‌ನ ಇಬ್ಬರು ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದರಿಂದ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಹಾಗಾಗಿ ಎಸ್ಕೆಎಂ ಬಲ 13 ಕ್ಕೆ ಕುಸಿದಿತ್ತು. ಈಗ ಎಲ್ಲಾ ಶಾಸಕರ ವಲಸೆಯಿಂದಾಗಿ ಕೇವಲ 1 ಕ್ಕೆ ಇಳಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.