
ಮುಂಬೈ(ಸೆ.19): ಮೋಸ್ಟ್ ವಾಂಟೆಡ್ ಉಗ್ರ, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರ ನಿನ್ನೆ ರಾತ್ರಿ ಖಾಕಿ ಬಲೆಗೆ ಬಿದ್ದಿದ್ದಾನೆ. ಉದ್ಯಮಿಯೊಬ್ಬರು ನೀಡಿದ ದೂರಿನ ಮೇರೆಗೆ, ದಾವೂದ್ನ ಕಿರಿಯ ಸಹೋದರ ಇಕ್ಬಾಲ್ ಕಸ್ಕರ್‌ನನ್ನ, ಮಹಾರಾಷ್ಟ್ರದ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ನೇತೃತ್ವದಲ್ಲಿ ಥಾಣೆಯ ಆಂಟಿ-ಎಕ್ಸ್ಟಾರ್ಶನ್ ಸೆಲ್ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಮುಂಬೈನ ನಗ್ಪದಾ ಪ್ರದೇಶದಲ್ಲಿ ಅಡಗಿದ್ದ ಇಕ್ಬಾಲ್ ಕಸ್ಕರ್
ಇನ್ನು ದಾವೂದ್ ಸಹೋದರ ಇಕ್ಬಾಲ್ ಕಸ್ಕರ್ ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಮುಂಬೈನ ನಗ್ಪದಾ ಪ್ರದೇಶದಲ್ಲಿ ವಾಸವಾಗಿದ್ದ ಇಕ್ಬಾಲ್ ಕಾಸ್ಕರ್, ದೊಡ್ಡ-ದೊಡ್ಡ ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ. ಥಾಣೆ, ಉಲ್ಲಾಸ್ನಗರ್, ದೊಂಬಿವ್ಲಿ ಪ್ರದೇಶಗಳಲ್ಲಿ ಉದ್ಯಮಿಗಳು ಹಾಗೂ ಬಿಲ್ಡರ್ಗಳನ್ನ ಹೆದರಿಸಿ, ಅವರಿಂದ ಕೋಟ್ಯಾಂತರ ರೂಪಾಯಿ ಹಣ ದೋಚಿದ್ದ. ಉದ್ಯಮಿಯೊಬ್ಬರು ನೀಡಿದ ದೂರಿನ ಬೆನ್ನಲ್ಲೇ ಇಕ್ಬಾಲ್ ಬಂಧನಕ್ಕೆ ಮಹಾರಾಷ್ಟ್ರ ಪೊಲೀಸರು ಬಲೆ ಬೀಸಿದ್ದರು. ಅಂತಿಮವಾಗಿ ಆರೋಪಿ ಇಕ್ಬಾಲ್ ಕಸ್ಕರ್ ನಿನ್ನೆ ರಾತ್ರಿ ಖಾಕಿ ಖೆಡ್ಡಾ ಕ್ಕೆ ಬಿದ್ದಿದ್ದಾನೆ
ಸಾರಾ- ಸಹರಾ ಪ್ರಕರಣದಲ್ಲೂ ಆರೋಪಿಯಾಗಿದ್ದ ಇಕ್ಬಾಲ್
2003ರಲ್ಲಿ ಯುಎಇ ನಿಂದ ಗಡಿಪಾರಾಗಿದ್ದ ಇಕ್ಬಾಲ್ ಕಸ್ಕರ್ ಸದ್ಯ ಮಹಾರಾಷ್ಟ್ರದ ಮುಂಬೈನಲ್ಲೇ ವಾಸವಾಗಿದ್ದ. ಈ ಹಿಂದೆ ಸುಲಿಗೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರ ಬಂದಿದ್ದ. ಕೊಲೆ ಪ್ರಕರಣವೊಂದರಲ್ಲೂ ಪೊಲೀಸರಿಗೆ ಬೇಕಾಗಿದ್ದ. 2007 ರ ಅವಳಿ ಶಾಪಿಂಗ್ ಮಾಲ್ಗಳಾದ ಸಾರಾ - ಸಹರಾದ ಅನಧಿಕೃತ ಪ್ರಕರಣದಲ್ಲೂ ಸಹ ಇಕ್ಬಾಲ್ ಕಸ್ಕರ್ನ ಪಾತ್ರವಿದೆ ಅಂತ ಅಂದಿನ ಬಾಂಬೆ ಹೈಕೋರ್ಟ್ ಹೇಳಿತ್ತು.
ಒಟ್ನಲ್ಲಿ ಸುಲಿಗೆ, ಕೊಲೆ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದ ಇಕ್ಬಾಲ್ ಕಸ್ಕರ್, ಮಹಾರಾಷ್ಟ್ರ ಪೊಲೀಸರ ಚಾಣಾಕ್ಷ ಕಾರ್ಯಾಚರಣೆಯಿಂದಾಗಿ ಅರೆಸ್ಟ್ ಆಗಿದ್ದಾನೆ. ಸದ್ಯ ದಾವೂದ್ ಸೋದರ ಬಂಧನವಾಗಿದ್ದು ಮುಂದಿನ ಟಾರ್ಗೆಟ್ ದಾವೂದ್ ಅಂತಾನೇ ಹೇಳಾಲಾಗ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.