ದಾವೂದ್ ವಿಶ್ವದ 2ನೇ ಸಿರಿವಂತ ಕ್ರಿಮಿನಲ್!

Published : Sep 14, 2017, 08:04 AM ISTUpdated : Apr 11, 2018, 01:04 PM IST
ದಾವೂದ್ ವಿಶ್ವದ 2ನೇ ಸಿರಿವಂತ ಕ್ರಿಮಿನಲ್!

ಸಾರಾಂಶ

ಭಾರತಕ್ಕೆ ಹಲವು ಪ್ರಕರಣಗಳಲ್ಲಿ ಜರೂರಾಗಿ ಬೇಕಾಗಿರುವ ಕುಖ್ಯಾತ ಭೂಗತಪಾತಕಿ, ಜಾಗತಿಕ ಭಯೋತ್ಪಾದಕ ದಾವೂದ್ ಇಬ್ರಾಹಿಂ ವಿಶ್ವದ ಇತಿಹಾಸದಲ್ಲೇ ಎರಡನೇ ಅತಿ ಶ್ರೀಮಂತ ಕ್ರಿಮಿನಲ್ ಆಗಿ ಹೊರಹೊಮ್ಮಿರುವ ಸಂಗತಿ ಬೆಳಕಿಗೆ ಬಂದಿದೆ.

ನವದೆಹಲಿ(ಸೆ.14): ಭಾರತಕ್ಕೆ ಹಲವು ಪ್ರಕರಣಗಳಲ್ಲಿ ಜರೂರಾಗಿ ಬೇಕಾಗಿರುವ ಕುಖ್ಯಾತ ಭೂಗತಪಾತಕಿ, ಜಾಗತಿಕ ಭಯೋತ್ಪಾದಕ ದಾವೂದ್ ಇಬ್ರಾಹಿಂ ವಿಶ್ವದ ಇತಿಹಾಸದಲ್ಲೇ ಎರಡನೇ ಅತಿ ಶ್ರೀಮಂತ ಕ್ರಿಮಿನಲ್ ಆಗಿ ಹೊರಹೊಮ್ಮಿರುವ ಸಂಗತಿ ಬೆಳಕಿಗೆ ಬಂದಿದೆ.

ವಿಶ್ವದ ವಿವಿಧೆಡೆ ಹಲವಾರು ಐಷಾರಾಮಿ ಆಸ್ತಿಗಳನ್ನು ಆತ ಹೊಂದಿದ್ದು, ಅವುಗಳ ಮೌಲ್ಯ 43 ಸಾವಿರ ಕೋಟಿ ರು. ಎಂಬ ಅಂದಾಜಿದೆ. ಕೊಲಂಬಿಯಾದ ಡ್ರಗ್ ದಂಧೆಕೋರ ಪಾಬ್ಲೋ ಎಸ್ಕೋಬಾರ್ ನಂತರ, ಕ್ರಿಮಿನಲ್‌'ಗಳ ಇತಿಹಾಸದಲ್ಲೇ ದಾವೂದ್ ಎರಡನೇ ಶ್ರೀಮಂತನಾಗಿದ್ದಾನೆ ಎಂದು ಬ್ರಿಟನ್‌ನ ಟ್ಯಾಬ್ಲಾಯ್ಡ್ ಪತ್ರಿಕೆ ‘ಮಿರರ್’ ವರದಿ ಮಾಡಿದೆ. ಪಾಬ್ಲೋ ಎಸ್ಕೋಬಾರ್ 1.91 ಲಕ್ಷ ಕೋಟಿ ರು.ನಷ್ಟು ಆಸ್ತಿ ಹೊಂದಿದ್ದ ಎಂದು ಹೇಳಲಾಗಿದೆ.

ದಶಕದಿಂದ ಪಾಕಿಸ್ತಾನದಲ್ಲೇ ಅಡಗಿರುವ ದಾವೂದ್, 21 ಬೇರೆ ಬೇರೆ ಹೆಸರುಗಳಿಂದ ಗುರುತಿಸಿ ಕೊಳ್ಳುತ್ತಾನೆ. 61 ವರ್ಷದ ದಾವೂದ್ ತಲೆಗೆ 160 ಕೋಟಿ ರು. ಬಹುಮಾನ ಘೋಷಣೆ ಮಾಡಲಾಗಿದೆ. ಬ್ರಿಟನ್‌ನ ವಾರ್ವಿಕ್‌ಶೈರ್‌ನಲ್ಲಿ ಹೋಟೆಲ್, ಮಿಡ್‌'ಲ್ಯಾಂಡ್‌'ನಲ್ಲಿ ವಸತಿಗೃಹಗಳನ್ನು ಆತ ಹೊಂದಿದ್ದಾನೆ ಎಂದು ವರದಿ ತಿಳಿಸಿದೆ.

ಮುಂಬೈನಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರ ಮಗನಾಗಿ ಜನಿಸಿದ ದಾವೂದ್, ವಿಶ್ವದ ಅತ್ಯಂತ ಪ್ರಬಲ ಅಪರಾ‘ ಜಾಲ ‘ಡಿ ಕಂಪನಿ’ಯನ್ನು ಮುನ್ನಡೆಸುತ್ತಿದ್ದಾನೆ. ಜಾಗತಿಕ ಅಪರಾಧ ಸಾಮ್ರಾಜ್ಯವನ್ನು ಹೊಂದಿರುವ ಆತ ಐದು ಖಂಡಗಳ 16 ರಾಷ್ಟ್ರಗಳಲ್ಲಿ ಬೇರು ಬಿಟ್ಟಿದ್ದಾನೆ. ಕುಖ್ಯಾತ ಉಗ್ರ ಸಂಘಟನೆ ಅಲ್‌ಖೈದಾ ಜತೆಗೂ ಆತನಿಗೆ ನಂಟಿದೆ ಎಂಬುದು ಭಾರತೀಯ ತನಿಖಾಧಿಕಾರಿಗಳ ಶಂಕೆ.

1993ರ ಮುಂಬೈ ಸರಣಿ ಸ್ಫೋಟ ಸೇರಿದಂತೆ ಭಾರತದಲ್ಲಿ ಸಂ‘ವಿಸಿದ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಈತ ಭಾರತಕ್ಕೆ ಬೇಕಾಗಿದ್ದಾನೆ ಎಂದು ವಿವಿ‘ ವರದಿಗಳನ್ನು ಉಲ್ಲೇಖಿಸಲಾಗಿದೆ. ‘ಾರತದ ಪೈರಸಿ ಮಾರುಕಟ್ಟೆಯ ವಹಿವಾಟು 64 ಸಾವಿರ ಕೋಟಿ ರು.ನಷ್ಟಿದ್ದು, ಆ ಪೈಕಿ ಶೇ.೭೦ರಷ್ಟು ದಾವೂದ್ ನಿಯಂತ್ರಣದಲ್ಲಿದೆ.

ಬಾಲಿವುಡ್ ಸಿನಿಮಾ ನಿರ್ಮಾಪಕರನ್ನು ಸುಲಿಗೆ ಮಾಡಿದ ಆರೋಪವೂ ಈತನ ಮೇಲಿದೆ. ಬಾಲಿವುಡ್ ಸಿನಿಮಾಗಳಿಗೆ ಹಣಕಾಸು ನೆರವು ನೀಡಿದ ಅಥವಾ ಚಿತ್ರ ನಿರ್ಮಾಣ ಮಾಡಿದ ನಿದರ್ಶನಗಳೂ ಇವೆ. ಭಯೋತ್ಪಾದನೆಗೆ ನೆರವು, ಮಾದಕ ವಸ್ತು ಕಳ್ಳ ಸಾಗಣೆ ಹಾಗೂ ಖೋಟಾನೋಟು ಜಾಲದಿಂದ ಅಪಾರ ಹಣವನ್ನು ದಾವೂದ್ ಇಬಾಹ್ರಿಂ ಗಳಿಸುತ್ತಿದ್ದಾನೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬ್ಯಾಂಕ್‌ಗೆ ಬಂದ ವೃದ್ಧನ ನಡವಳಿಕೆಯಿಂದ ಅನುಮಾನ; ಜೀವ, ಜೀವನಮಾನದ ಹಣ ಉಳಿಸಿದ ಮ್ಯಾನೇಜರ್!
ಮಂಗಳೂರು ಫೇಮಸ್ ಫುಡ್ ಚಿಕನ್‌ ಘೀ ರೋಸ್ಟ್ ನ ಅಸಲಿ ರುಚಿಯ ರಹಸ್ಯವಿದು!