
ಲಕ್ನೋ: ಉತ್ತರ ಪ್ರದೇಶ ಬಿಜೆಪಿ ಶಾಸಕ ತಮ್ಮ ಮಗಳನ್ನು ಮದುವೆಯಾದ ವ್ಯಕ್ತಿಯ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ನಕಲಿ ಗುರುತಿನ ಚೀಟಿಗಳೊಂದಿಗೆ 25 ಮದುವೆಯಾಗಿ ಮಹಿಳೆಯರಿಗೆ ವಂಚನೆ ಮಾಡಿರುವ ವ್ಯಕ್ತಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡುವಂತೆ ಮಾಡಿ ಮೋಸ ಮಾಡಿದ್ದಾರೆ ಎಂದು ಶಾಸಕ ಆರೋಪಿಸಿದ್ದಾರೆ. ಸದ್ಯ ಶಾಸಕ ಘಟನೆ ಸಂಬಂಧ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಸೇವತ ವಿಧಾನಸಭಾ ಕ್ಷೇತ್ರದ ಶಾಸಕ ಜ್ಞಾನ್ ತಿವಾರಿ ಆಗಸ್ಟ್ 06ರಂದು ತಮ್ಮ ಸಾಮಾಜಿಕ ಜಾಲತಾಣಲದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. 2024ರಲ್ಲಿ ಮಿಶ್ರಿಖ್ನ ಚಂದ್ರವಾಲ್ ಪ್ರದೇಶದ ಅನುಜ್ ತ್ರಿವೇದಿ ಪುತ್ರನಾದ ಪ್ರಖರ್ ತ್ರಿವೇದಿಯೊಂದಿಗೆ ತನ್ನ ಮಗಳಾದ ಪ್ರಜ್ಞಾ ಮದುವೆಯಾಗಿತ್ತು ಎಂದು ತಿಳಿಸಿದ್ದಾರೆ. ವಿವಾದ ಸಂದರ್ಭದಲ್ಲಿ ಮುಂಬೈ ಮೂಲದ ರಿಯಲ್ ಎಸ್ಟೇಟ್ ವ್ಯಾಪಾರಿ ಅಂತ ಅನುಜ್ ತ್ರಿವೇದಿ ಹೇಳಿದ್ದ, ಅಪರಾಧ ಹಿನ್ನೆಲೆ ಹಾಗೂ ಆತನ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಮುಚ್ಚಿಟ್ಟಿದ್ದ ಎಂದು ಆರೋಪಿಸಿದ್ದಾರೆ.
ಮದುವೆಯಾದ ಸುಮಾರು ಎರಡು ವರ್ಷಗಳ ಬಳಿಕ ಅಳಿಯ ಪ್ರಖರ್ ತ್ರಿವೇದಿಗೆ ಸಂಬಂಧಿಸಿದ ಅನುಮಾಸ್ಪದ ಕೃತ್ಯಗಳು ಮತ್ತು ಆತನ ಕುಟುಂಬ ಚಟುವಟಿಕೆಗಳ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಇತರ ಮಾರ್ಗಗಳ ಮೂಲಕ ಗೊತ್ತಾಯಿತು. ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆತ ಹಲವು ಮಂದಿ ಮಹಿಳೆಯರನ್ನು ಮದುವೆಯಾಗಿ ವಂಚನೆ ಮಾಡಿದ್ದಾನೆ. ಪ್ರೀತಿ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ. ಇದರಿಂದ ಪ್ರಖರ್ ಕುಟುಂಬದೊಂದಿಗೆ ಇದ್ದ ಎಲ್ಲಾ ಸಂಬಂಧಗಳನ್ನು ಮುರಿದುಕೊಂಡಿದ್ದೇನೆ ಎಂದು ಬಿಜೆಪಿ ಶಾಸಕ ಹೇಳಿದ್ದಾರೆ.
ಈ ಘಟನೆ ನಮ್ಮ ಕುಟುಂಬಕ್ಕೆ ತೀವ್ರ ಆಘಾತ ಉಂಟು ಮಾಡಿದೆ. ಓರ್ವ ಶಾಸಕನಾಗಿ ನನ್ನ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಿದ್ದಾರೆ. ಅನುಜ್ ತ್ರಿವೇದಿಗೆ ಮರಣದಂಡನೆ ಶಿಕ್ಷೆ ನೀಡಬೇಕು. ತಮ್ಮ ಅಳಿಯ ಕೂಡ ಇದರಲ್ಲಿ ಆರೋಪಿ ಅಂತ ಗೊತ್ತಾದರೆ, ಕಾನೂನಿನ ಅಡಿ ಶಿಕ್ಷೆ ಆಗಬೇಕು ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.
ಬಿಜೆಪಿ ಶಾಸಕ ನೀಡಿದ ದೂರಿನ ಮೇರೆಗೆ ಪೊಲೀಸರು ಅನುಜ್ ತ್ರಿವೇದಿ, ಪ್ರಖರ್ ತ್ರಿವೇದಿ ಎಂಬವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದು, ಇಬ್ಬರನ್ನು ಬಂಧನ ಮಾಡಿರೋದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನು, ಮಗಳ ಮದುವೆಗೂ ಮುನ್ನ ಅಳಿಯ ಕುಟುಂಬ ಬಗ್ಗೆ ವಿಚಾರಣೆ ನಡೆಸಿದ ವೇಳೆ ತಪ್ಪು ಮಾಹಿತಿ ನೀಡಿ ನಮಗೆ ವಂಚನೆ ಮಾಡಿದ್ದಾರೆ. ಆರೋಪಿ 25 ಮದುವೆಯಾಗಿದ್ದಾನೆ. ಈಗ ನನ್ನ ಮಗಳನ್ನು ಮನೆಗೆ ವಾಪಸ್ ಕರೆಯಿಸಿಕೊಂಡಿದ್ದೇನೆ ಅಂತ ಬಿಜೆಪಿ ಶಾಸಕ ರೇಯುಸಾ ಠಾಣೆ ಪೊಲೀಸರಿಗೆ ದೂರು ನೀಡಿರುವುದಾಗಿ ಎನ್‌ಡಿ ಟಿವಿ ವರದಿ ಮಾಡಿದೆ.
BJP MLA Alleges Fraud by Son-in-Law, Seeks Strict Action
BJP MLA Gyan Tiwari from Uttar Pradesh's Seuta constituency has released a video with his daughter, accusing his son-in-law and the latter's father of fraud, cheating and several other serious offences.
An emotional… pic.twitter.com/AMHH4p56iL— Atulkrishan (@iAtulKrishan1) August 6, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.