
ಕೃಷ್ಣರಾಜಪುರ(ನ.29): ಚಿಕನ್ ಸಾರು ರುಚಿಯಿಲ್ಲವೆಂಬ ಕಾರಣಕ್ಕೆ ಮಹಿಳೆಯೊಬ್ಬರು ಪತಿಯೊಂದಿಗೆ ಸೇರಿ ತಾಯಿಯನ್ನೇ ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿತ್ತಗನೂರಿನಲ್ಲಿ ನಡೆದಿದೆ.
ಮುನಿರತ್ನಮ್ಮ (೫೦) ಮೃತ ದುರ್ದೈವಿ. ಸೌಮ್ಯ ಮತ್ತು ವೀರಪ್ಪ ಕೃತ್ಯವೆಸಗಿರುವ ಆರೋಪಿಗಳು. ಇಲ್ಲಿನ ಕೆ.ಆರ್. ಇನ್ ಹೊಟೇಲ್‌ನಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ವೀರಪ್ಪ, ಕೆಲ ವರ್ಷಗಳ ಹಿಂದಷ್ಟೇ ಕಿತ್ತಗನೂರಿನ ಸೌಮ್ಯಳನ್ನು ಪ್ರೇಮ ವಿವಾಹವಾಗಿದ್ದ. ಬಳಿಕ ಅತ್ತೆ ಮನೆಯಲ್ಲೇ ನೆಲೆಸಿದ್ದ.
ಕುಡಿಯುವ ಚಟವಿದ್ದ ವೀರಪ್ಪ, ಪ್ರತಿ ದಿನ ಅತ್ತೆಯೊಂದಿಗೆ ಜಗಳವಾಡುತ್ತಿದ್ದ. ಭಾನುವಾರ ರಾತ್ರಿ ಚಿಕನ್ ಸಾರು ರುಚಿಯಿಲ್ಲವೆಂಬ ಕಾರಣಕ್ಕೆ ಜಗಳವಾಡುತ್ತಿದ್ದ ವೀರಪ್ಪನನ್ನು ನೆರೆಹೊರೆಯವರು ಜಗಳ ಬಿಡಿಸಿ ವಾತಾವರಣವನ್ನು ತಿಳಿಗೊಳಿಸಿದ್ದರು. ಬೆಳಗಿನ ಜಾವ ೨ ಗಂಟೆಗೆ ಸುಮಾರಿಗೆ ತನ್ನ ಅತ್ತೆಯ ಕತ್ತು ಹಿಸುಕಿ ಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಪತ್ನಿ ಸೌಮ್ಯ, ತಾಯಿಯ ಕಾಲುಗಳನ್ನು ಹಿಡಿದು ಹತ್ಯೆಗೆ ಸಹಾಯ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.