
ಬೆಂಗಳೂರು(ನ.29): ಬ್ಯಾಂಕ್ ಕ್ಯಾಶ್ ಇದ್ದ ವಾಹನ ಲೂಟಿ ಮಾಡಿ ರಾಜಧಾನಿಯಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದ್ದ ಚಾಲಾಕಿ ಡಾಮ್ನಿಕ್ ಕೊನೆಗೂ ಅಂದರ್ ಆಗಿದ್ದಾನೆ. ನಿನ್ನೆ ರಾತ್ರಿ ಕೆ.ಆರ್ ಪುರಂ ಬಳಿ ಉಪ್ಪಾರ್ ಪೇಟೆ ಪೊಲೀಸರು ಡಾಮ್ನಿಕ್ ಹೆಡೆಮುರಿಕಟ್ಟಿದ್ದಾರೆ.
ಕೋಟಿ ಹಣ ಲೂಟಿ ಮಾಡಿ ರಾಜಧಾನಿ ಪೊಲೀಸರ ನಿದ್ದೆ ಕೆಡಿಸಿದ್ದ ಡಾಮ್ನಿಕ್ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ. ಬಾಣಸವಾಡಿ ಪೊಲೀಸರು ಪತ್ನಿ ಎಲಿವಿನಾಳನನ್ನು ಅರೆಸ್ಟ್ ಮಾಡಿದ್ದ ವಿಚಾರ ತಿಳಿದ ಡಾಮ್ನಿಕ್ ನಿನ್ನೆ ಕೆ.ಆರ್ ಪುರಂಗೆ ಬಂದಿದ್ದಾನೆ. ಟಿನ್ ಫ್ಯಾಕ್ಟರಿ ಬಳಿ ರಾತ್ರಿ ಸ್ನೇಹಿತರ ಜೊತೆ ಡಾಮ್ನಿಕ್ ಮದ್ಯ ಸೇವಿಸುವ ವೇಳೆ ಮುಪ್ತಿಯಲ್ಲಿದ್ದ ಉಪ್ಪಾರ್ ಪೇಟೆ ಪೊಲೀಸರು ಡಾಮ್ನಿಕ್ ನನ್ನು ಖೆಡ್ಡಾಗೆ ಬೀಳಿಸಿದ್ದಾರೆ.
ಇನ್ನೂ, ಉಪ್ಪಾರ್ ಪೇಟೆ ಪೊಲೀಸರ ವಿಚಾರಣೆ ವೇಳೆ ಡಾಮ್ನಿಕ್ ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ. ಆರೋಪಿಗಳಿಂದ ಈಗಾಗಲೇ 79 ಲಕ್ಷ ಹಣ ರಿಕವರಿ ಮಾಡಲಾಗಿದೆ. ಇನ್ನು ಹಣತುಂಬಿಸುವ ಜವಬ್ದಾರಿ ಹೊತ್ತಿದ್ದ ಲಾಜಿ ಕ್ಯಾಶ್ ಸಂಸ್ಥೆ ಆರ್ ಬಿ ಐ ನಿಯಮಗಳನ್ನು ಮೀರಲಾಗಿದ್ಯಾ ಎನ್ನುವ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದು ನಿಯಮ ಉಲ್ಲಂಘನೆಯಾಗಿದ್ರೆ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದಾರೆ.
ಅದೇನೇ ಇರ್ಲಿ ಹೆಂಡತಿಯ ಅಸೆಗಳನ್ನು ಪೂರೈಸಲು ಆಗದೇ ಡಾಮ್ನಿಕ್ ಕಳ್ಳತನ ಮಾಡಿರೋದು ಪೊಲೀಸರ ವಿಚಾರಣೆಯಲ್ಲಿ ಗೊತ್ತಾಗಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.