ಈ ಕುಟುಂಬದ ಮುತ್ತೈದೆಯರು ಕೇವಲ ಬಿಳಿ ಸೀರೆಯನ್ನೇ ಉಡಬೇಕು!

Published : Dec 20, 2016, 08:49 AM ISTUpdated : Apr 11, 2018, 12:36 PM IST
ಈ ಕುಟುಂಬದ ಮುತ್ತೈದೆಯರು ಕೇವಲ ಬಿಳಿ ಸೀರೆಯನ್ನೇ ಉಡಬೇಕು!

ಸಾರಾಂಶ

ಕುಂಕುಮ, ಬಳೆ, ಹೂವು ಹೀಗೆ 16 ರೀತಿಯ ಶೃಂಗಾರದಿಂದ ಮುತ್ತೈದೆಯರನ್ನು ಗುರುತಿಸಲಾಗುತ್ತದೆ. ಆದರೆ ಛತ್ತೀಸ್'ಘಡ್'ನ ಕುಟುಂಬವೊಂದರ ಮುತ್ತೈದೆಯರು ಯಾವುದೇ ಶೃಂಗಾರ ಮಾಡುವಂತಿಲ್ಲ. ಕೇವಲ ಬಿಳಿ ಬಣ್ಣದ ಸೀರೆಯನ್ನಷ್ಟೇ ಉಡಬೇಕಾದ ಇವರು ಮುತ್ತೈದೆಯಾಗಿದ್ದರೂ ಓರ್ವ ವಿಧವೆಯಂತೆ ಬದುಕಬೇಕು.

ಛತ್ತೀಸ್'ಗಡ್(ಡಿ.20):  ಕುಂಕುಮ, ಬಳೆ, ಹೂವು ಹೀಗೆ 16 ರೀತಿಯ ಶೃಂಗಾರದಿಂದ ಮುತ್ತೈದೆಯರನ್ನು ಗುರುತಿಸಲಾಗುತ್ತದೆ. ಆದರೆ ಛತ್ತೀಸ್'ಘಡ್'ನ ಕುಟುಂಬವೊಂದರ ಮುತ್ತೈದೆಯರು ಯಾವುದೇ ಶೃಂಗಾರ ಮಾಡುವಂತಿಲ್ಲ. ಕೇವಲ ಬಿಳಿ ಬಣ್ಣದ ಸೀರೆಯನ್ನಷ್ಟೇ ಉಡಬೇಕಾದ ಇವರು ಮುತ್ತೈದೆಯಾಗಿದ್ದರೂ ಓರ್ವ ವಿಧವೆಯಂತೆ ಬದುಕಬೇಕು.

ಇಲ್ಲಿನ ಕೋಸಮೀ ಎಂಬ ೂರಿನ ಕುಟುಂಬವೊಂದರಲ್ಲಿ ಈ ಪದ್ಧತಿ ಹಿಂದಿನಿಂದಲೂ ನಡೆದು ಬಂದಿದೆಯಂತೆ. ಇಲ್ಲಿನ ಮುತ್ತೈದೆಯರು ತಪ್ಪಿಯೂ ಯಾವುದೇ ಶೃಂಗಾರ ಮಾಡುವುದಿಲ್ಲ, ಬಣ್ಣದ ಸೀರೆಯನ್ನೂ ಉಡುವುದಿಲ್ಲ. ಶತಮಾನದಿಂದ ನಡೆದು ಬಂದ ಈ ಪದ್ಧತಿಯನ್ನು ಈ ಕುಟುಂಬದ ಸದಸ್ಯರು ಇಂದಿಗೂ ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ.

ಈ ಮನೆಯಲ್ಲಿ ಹಿರಿಯ ಸದಸ್ಯೆಯಿಂದ ನವ ವಧುವಿನವರೆಗಿನ ಎಲ್ಲರೂ ಕೇವಲ ಬಿಳಿ ಬಣ್ಣದ ಸೀರೆಯಲ್ಲಿ ಕಂಡು ಬರುತ್ತಾರೆ. ಎಷ್ಟೆಂದರೆ ಮದುವೆ ಮಂಟಪದಲ್ಲೂ ವಧು ಬಿಳಿ ಸೀರೆಯಲ್ಲಿ ಯಾವುದೇ ಶೃಂಗಾರವಿಲ್ಲದೇ ಕುಳಿತುಕೊಳ್ಳಬೇಕು. ಆದರೆ ಈ ಮನೆಯ ಹೆಣ್ಮಕ್ಕಳು ಬಣ್ಣದ ಬಟ್ಟೆ ಧರಿಸಿ ಶೃಂಗಾರ ಮಾಡುವ ಅವಕಾಶವಿದ್ದು, ಈ ನಿಯಮ ಕೇವಲ ಸೊಸೆಯರಿಗೆ ಅನ್ವಯಿಸುತ್ತದೆ.

ಅಚ್ಚರಿಯ ವಿಚಾರವೆಂದರೆ ಮನೆಯ ಸೊಸೆಯರು ಇಷ್ಟೊಂದು ಕಷ್ಟ ಪಟ್ಟರೂ ಎಲ್ಲರೂ ತಮ್ಮ ಮನೆಯ ಹೆಣ್ಮಕ್ಕಳನ್ನು ಈ ಮನೆಯ ಸೊಸೆಯಾಗಿಸಲು ಹಾತೊರೆಯುವುದರೊಂದಿಗೆ ಇದು ತಮ್ಮ ಸೌಭಾಗ್ಯ ಎನ್ನುತ್ತಿದ್ದಾರಂತೆ. ಒಂದು ವರ್ಷದ ಹಿಂದೆ ಈ ಮನೆಗೆ ಸೊಸೆಯಾಗಿ ಬಂದ ಪದವೀಧರೆ ಫಿರಂತನ್ ಭಾಯೀ ಎಂಬಾಕೆಯೂ ಇಂತಹ ಅಂಧ ಪದ್ಧತಿಯನ್ನು ಖುಷಿಯಾಗಿ ಪಾಲಿಸಿಕೊಂಡು ಹೋಗುತ್ತಿದ್ದಾಳೆ.

ಅದೇನಿದ್ದರೂ ಮದುವೆಯಾಗಿ ಮುತ್ತೈದೆಯಾಗಿ ಬಂದ ನವ ವಧು, ಶೃಂಗಾರ ಮಾಡಿ ಖುಷಿಯಾಗಿ ಇರಬೇಕು ಎಂಬುವುದು ನಮ್ಮ್ಲಿರುವ ಪದ್ಧತಿ. ಆದರೆ ಇದಕ್ಕೆ ವಿರುದ್ಧವಾಗಿ ಯಾವುದೇ ಶೃಂಗಾರವಿಲ್ಲದೆ ವಿಧವೆಯಂತೆ ಇರಬೇಕೆಂಬ ಈ ಪದ್ಧತಿ ಆಚರಿಸುವ ಹಿಂದಿನ ಕಾರಣ ಮಾತ್ರ ರಹಸ್ಯವಾಗಿದೆ.    

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯಪುರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 5 ಎಕರೆ ಕಬ್ಬು, ಟ್ರೈಲರ್ ಬೆಂಕಿಗಾಹುತಿ! ರೈತ ಕಣ್ಣೀರು
ಜನವರಿ 1, 2026 ರಿಂದ 10 ನಿಯಮಗಳಲ್ಲಿ ಬದಲಾವಣೆ, ಸಂಬಳ-ಪಡಿತರ ಮೇಲೆ ನೇರ ಪರಿಣಾಮ