
ಮುಂಬೈ(ಡಿ.20): ಮಹಿಳೆಯೊಬ್ಬಳು ಪಕ್ಕದ ಮನೆಯ 5 ವರ್ಷದ ಹೆಣ್ಣು ಮಗುವನ್ನ 15ನೇ ಮಹಡಿಯಿಂದ ಕೆಳಗೆಸದಿರುವ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ. ಮೇಲಿನಿಂದ ಬಿದ್ದ ರಭಸಕ್ಕೆ ಮಗು ಸ್ಥಳದಲ್ಲೇ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಮುಂಬೈನ ವಿಘ್ನಹರ್ತಾ ವಸತಿ ಸಮುಚ್ಛಯದಲ್ಲಿ ಸೋಮವಾರ ಮಧ್ಯರಾತ್ರಿ 12.30ರ ಸುಮಾರಿಗೆ ಈ ದುಷ್ಕೃತ್ಯ ಎಸಗಿದ್ದಾಳ. ಪಕ್ಕದ ಮನೆಯವರ ಜೊತೆ ಯಾವುದೋ ವಿಷಯಕ್ಕೆ ಜಗಳ ಮಾಡಿಕೊಂಡಿದ್ದ ಮಹಿಳೆ ಅದೇ ಕೋಪದಲ್ಲಿ ಮಗುವನ್ನ ಎತ್ತಿ ಕೆಳಗೆ ಎಸೆದಿದ್ದಾಳೆ. ಮಗು ಕೆಳಗೆ ಬಿದ್ದು ಸತ್ತಿದದ್ದರೂ ಕೊನೆಯ ಾಸೆಯಿಂದ ಪೋಷಕರು ಆಸ್ಪತ್ರೆಗೆ ಕೊಂಡೊಯ್ದು ಬದುಕಿಸುವ ಪ್ರಯತ್ನ ನಡೆಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.