
ಜೈಪುರ (ಜ.11): ಜೈಪುರದಲ್ಲಿ ಮಗಳೆ ತನ್ನ ತಾಯಿಗೆ ಜೋಡಿ ಹುಡುಕಿ ಮದುವೆ ಮಾಡಿರುವ ಅಪರೂಪದ ಘಟನೆಯೊಂದು ನಡೆದಿದೆ. ತನ್ನ ವಿಧವೆ ತಾಯಿಗೆ ಜೋಡಿಯನ್ನು ಹುಡುಕಿದ್ದಾರೆ. ಸಮಾಜ ಹಾಗೂ ಕುಟುಂಬದ ವಿರೋಧದ ನಡುವೆಯೂ ಕೂಡ ವಿವಾಹ ಕಾರ್ಯವನ್ನು ನಡೆಸಿದ್ದಾಳೆ.
ಗೀತಾ ಅಗರ್ವಾಲ್ ಎಂಬ 53 ವರ್ಷದ ಶಿಕ್ಷಕಿ 2016ರಲ್ಲಿ ತಮ್ಮ ಪತಿಯನ್ನು ಕಳೆದುಕೊಂಡರು. ಹೃದಯಾಘಾತದಿಂದ ಅವರ ಪತಿ ಮರಣ ಹೊಂದಿದರು. ಇದಾದ ಬಳಿಕ ಗೀತಾರಿಗೆ ಖಿನ್ನತೆ ಸಮಸ್ಯೆಯು ಕಾಡಿತು. ಇದೇ ವೇಳೆ ಅವರ ಮಗಳು ಕೂಡ ಉನ್ನತ ಶಿಕ್ಷಣಕ್ಕಾಗಿ ಬೇರೆಡೆ ತೆರಳಿದ್ದು, ಇನ್ನಷ್ಟು ನೋವನ್ನುಂಟು ಮಾಡಿತು.
ಆಗ ತಾಯಿಯನ್ನು ಒಂಟಿಯಾಗಿ ಬಿಡಬಾರದು ಎಂದು ಮನಸ್ಸು ಮಾಡಿದ ಸಂಹಿತಾ ಮ್ಯಾಟ್ರಿಮೋನಿಯಲ್ ಸೈಟ್’ನಲ್ಲಿ ತಾಯಿಯ ಒಪ್ಪಿಗೆ ಇಲ್ಲದೇ ಫೋಟೊ ಹಾಕಿದರು. ಕಳೆದ ಡಿಸೆಂಬರ್’ನಲ್ಲಿ ರೆವೆನ್ಯೂ ಇನ್ಸ್’ಪೆಕ್ಟರ್ ಓರ್ವರೊಂದಿಗೆ ತಾಯಿಯ ವಿವಾಹವನ್ನು ನೆರವೇರಿಸಿದರು. ಖಿನ್ನತೆಗೆ ಒಳಗಾಗಿದ್ದ ಗೀತಾರನ್ನು ಮುಂಚಿನಂತಾಗಿಸಲು ಮಗಳು ಸಂಹಿತಾ ಪಾತ್ರ ಪ್ರಮುಖವಾದುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.