
ಬೆಂಗಳೂರು (ಸೆ.16): ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮತ್ತು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಒಡೆತನದ ಎಸ್. ಎಸ್. ಆಸ್ಪತ್ರೆಗಳು ರಾಜಕಾಲುವೆ ಒತ್ತುವರಿಯನ್ನು ತೆರವು ಮಾಡುವುದಕ್ಕೆ ಬಿಬಿಎಂಪಿ ಹಿಂದೇಟು ಹಾಕುತ್ತಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ರಾಜಕಾಲುವೆ ಮೇಲಿರುವ ನಟ ದರ್ಶನ್ ಹಾಗೂ ಎಸ್ಎಸ್ ಆಸ್ಪತ್ರೆ ತೆರವು ವಿಚಾರ ನಮ್ಮ ವ್ಯಾಪ್ತಿಗೆ ಬರಲ್ಲ ಎಂದು ಪಾಲಿಕೆ ಹಾಗೂ ಬಿಡಿಎ ಕೈಚೆಲ್ಲಿದೆ.
ದೊಡ್ಡವರ ತೆರವಿಗೆ ಮುಂದಾಗ ಇಲಾಖೆಗಳು ತಪ್ಪಿಸಿಕೊಳ್ಳಲು ಕಾರಣಗಳ ಲಿಸ್ಟ್ ರೆಡಿ ಮಾಡಿಕೊಂಡಿದೆ. ಈ ಪ್ರಕಾರ ರಾಜರಾಜೇಶ್ವರಿ ನಗರದಲ್ಲಿ ಇರುವ ಐಡಿಯಲ್ ಹೋಮ್ಸ್ ಲೇಔಟ್ನಲ್ಲಿರುವ ದರ್ಶನ್ ಮನೆ, ಎಸ್ಎಸ್ ಆಸ್ಪತ್ರೆ ಇರುವ ಲೇಔಟ್ ಬಿಡಿಎ ವ್ಯಾಪ್ತಿಗೆ ಬರುತ್ತದೆ.
1989ರಲ್ಲಿ ಬಿಡಿಎ ಪರಿಷ್ಕೃತ ನಕ್ಷೆಗೆ ಅನುಮತಿ ಕೊಟ್ಟಿತ್ತು. ಈ ನಕ್ಷೆ ಮಂಜೂರಾತಿ ಪ್ರಶ್ನಿಸಿ ಸಂಘಟನೆಯೊಂದು ಹೈಕೋರ್ಟ್ ಮೆಟ್ಟಿಲು ಏರಿದಾಗ 2003ರಲ್ಲಿ ಬಿಡಿಎ ಹಾಗೂ ಡಿಸಿ ಜಂಟಿ ಸರ್ವೇ ನಡೆಸಿ ಒತ್ತುವರಿಯಾಗಿದ್ದರೆ ತೆರವು ಗೊಳಿಸುವಂತೆ ಕೋರ್ಟ್ ಆದೇಶ ನೀಡಿತ್ತು. ಈ ಪ್ರಕಾರ 2014ರಲ್ಲಿ ಡಿಸಿ ತೆರವಿಗೆ ಆದೇಶ ನೀಡಿದ್ದಾರೆ. ಹಾಗಾಗಿ ಒತ್ತುವರಿ ತೆರವು ವಿಚಾರ ಡಿಸಿ ವಿವೇಚನೆಗೆ ಬಿಟ್ಟಿದ್ದು ಈಗ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.