
ಪಟಿಯಾಲ: 2003ರಲ್ಲಿ ನಡೆದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಪಂಜಾಬಿ ಪಾಪ್ ಗಾಯಕ ದಲೇರ್ ಮೆಹಂದಿ ದೋಷಿ ಎಂದು ಪರಿಗಣಿಸಿರುವ ಸ್ಥಳೀಯ ನ್ಯಾಯಾಲಯವೊಂದು, ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಅಲ್ಲದೆ, 1,000 ರು. ದಂಡವನ್ನೂ ವಿಧಿಸಲಾಗಿದೆ. ಆದಾಗ್ಯೂ, ಜಾಮೀನು ಬಾಂಡ್ ಆಧಾರದಲ್ಲಿ ಸದ್ಯಕ್ಕೆ ಅವರು ಬಿಡುಗಡೆಯಾಗಿದ್ದಾರೆ. ದಲೇರ ಮತ್ತು ಅವರ ಸೋದರ ಶಂಶೇರ್ ವಿದೇಶಕ್ಕೆ ವಲಸೆ ಹೋಗಲು ಬಯಸಿದವರನ್ನು ತಮ್ಮ ಗಾಯನ ತಂಡದ ಸದಸ್ಯರು ಎಂದು ಹೇಳಿ ವಿದೇಶಕ್ಕೆ ಕರೆದೊಯ್ಯುತ್ತಿದ್ದರು.
ಬಳಿಕ ಅವರನ್ನು ಅಲ್ಲೇ ಬಿಟ್ಟು ಬರುತ್ತಿದ್ದರು. ಹೀಗೆ ಹಣ ಪಡೆದು ಹಲವರನ್ನು ಅಕ್ರಮವಾಗಿ ವಿದೇಶದಲ್ಲಿ ಬಿಟ್ಟು ಬಂದ ಆರೋಪ ಇಬ್ಬರ ಮೇಲೂ ಕೇಳಿಬಂದಿತ್ತು. ಆದರೆ ಇನ್ನು ಕೆಲವರಿಂದ ಹಣ ಪಡೆದರೂ, ಅವರನ್ನು ಸೋದರರು, ವಿದೇಶಕ್ಕೆ ಕರೆದೊಯ್ದಿರಲಿಲ್ಲ ಎನ್ನಲಾಗಿದೆ. ಅಂಥವರು ದೂರು ನೀಡಿದ ಬಳಿಕ ಹಗರಣ ಬೆಳಕಿಗೆ ಬಂದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.