20 ವರ್ಷಕ್ಕಿಂತ ಹಳೆಯ ವಾಣಿಜ್ಯ ವಾಹನ ನೋಂದಣಿ ರದ್ದು

By Suvarna Web DeskFirst Published Mar 17, 2018, 8:47 AM IST
Highlights

ಹಳೆಯ ವಾಹನಗಳು ಗಂಭೀರ ಪ್ರಮಾಣದಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಇಂಧನ ಬಳಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ವಾಣಿಜ್ಯ ಉದ್ದೇಶದ ವಾಹನಗಳಿಗೆ ಗರಿಷ್ಠ 20 ವರ್ಷಗಳ ವಯೋಮಿತಿ ನಿಗದಿ ಮಾಡಲು ನಿರ್ಧರಿಸಿದೆ.

ನವದೆಹಲಿ: ಹಳೆಯ ವಾಹನಗಳು ಗಂಭೀರ ಪ್ರಮಾಣದಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಇಂಧನ ಬಳಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ವಾಣಿಜ್ಯ ಉದ್ದೇಶದ ವಾಹನಗಳಿಗೆ ಗರಿಷ್ಠ 20 ವರ್ಷಗಳ ವಯೋಮಿತಿ ನಿಗದಿ ಮಾಡಲು ನಿರ್ಧರಿಸಿದೆ. ಈ ಮೂಲಕ ಇಂಥ ವಾಹನಗಳ ನೋಂದಣಿಯನ್ನು ರದ್ದುಪಡಿಸಲು ನಿರ್ಧರಿಸಿದೆ. 2020ಕ್ಕೆ ಇಂಥದ್ದೊಂದು ನಿಯಮವನ್ನು ಜಾರಿಗೆ ತರುವ ಉದ್ದೇಶ ಸರ್ಕಾರದ್ದು ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಪ್ರಧಾನಿ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಇಂಥದ್ದೊಂದು ನಿರ್ಣಯ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ನೀತಿ ಆಯೋಗ, ಸಾರಿಗೆ, ಭಾರೀ ಕೈಗಾರಿಕೆ, ಹಣಕಾಸು ಮತ್ತು ಪರಿಸರ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಸರ್ಕಾರದ ಹೊಸ ನೀತಿಯ ಅನ್ವಯ 2000ಕ್ಕೆ ಮೊದಲು ನೋಂದಣಿಯಾಗಿ ರಸ್ತೆಗೆ ಇಳಿದಿದ್ದ ಎಲ್ಲಾ ವಾಹನಗಳು 2020ಕ್ಕೆ ರಸ್ತೆಯಿಂದ ಹೊರಗೆ ಹೋಗುವುದು ಅನಿವಾರ್ಯವಾಗಲಿದೆ. ಅಂದರೆ ಅಂದಾಜು 7 ಲಕ್ಷದಷ್ಟುಬಸ್‌, ಲಾರಿ, ಟ್ಯಾಕ್ಸಿ ಸೇರಿದಂತೆ ವಿವಿಧ ವಾಣಿಜ್ಯ ಉದ್ದೇಶದ ವಾಹನಗಳ ನೋಂದಣಿ ರದ್ದಾಗಲಿದೆ. ಇದೇ ವೇಳೆ ಹಳೆಯ ವಾಹನವನ್ನು ಗುಜರಿಗೆ ಹಾಕಿ, ಹೊಸ ವಾಹನ ಖರೀದಿ ಮಾಡಲು ಬಯಸುವವರಿಗೆ, ಹೊಸ ವಾಹನದ ಖರೀದಿ ವೇಳೆ ಶೇ.10ರಷ್ಟುರಿಯಾಯಿತಿ ನೀಡುವ ಪ್ರಸ್ತಾಪವೂ ಸರ್ಕಾರದ ಮುಂದಿದೆ.

ಆದರೆ, ಖಾಸಗಿ ವಾಹನಗಳಿಗೆ ಕಾಲಮಿತಿಯಿಲ್ಲ. ವಾಹನದ ಸಾಮರ್ಥ್ಯ ಪರೀಕ್ಷೆ ನಡೆಸಿದ್ದಲ್ಲಿ, ಖಾಸಗಿ ವಾಹನಗಳನ್ನು ರಸ್ತೆಗಿಳಿಸುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಜೊತೆಗೆ ಹಳೆಯ ವಾಹನಗಳನ್ನು ಗುಜಿರಿಗೆ ಮಾರಾಟ ಮಾಡುವಾಗ ಅದಕ್ಕೆ ಜಿಎಸ್‌ಟಿ ಅನ್ವಯ ಮಾಡದಂತಹ ಪ್ರಸ್ತಾಪವೂ ಇದೆ.

click me!