
ಜನ ಇತ್ತೀಚೆಗೆ ಮಾತಾಡೋದು ಬಿಟ್ಟು ಫೇ'ಸ್'ಬುಕ್, ಟೀವಿ ನೋಡೋದರಲ್ಲೇ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ ಎಂಬುದು ಎಲ್ಲರ ದೂರು.
ದೂರು, ಕಿರಿಕಿರಿ ಮಟ್ಟಿಗೇ ಇದ್ದ ಈ ವಿಷಯ ಇದೀಗ ಬೆಡ್‌ರೂಂವರೆಗೂ ಹೋಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಜನ ವಿಪರೀತವಾಗಿ ಟಿವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವುದು ಸೆಕ್ಸ್ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವರದಿ ಹೇಳಿದೆ. ಅಮೆರಿಕದಲ್ಲಿ ಸೆಕ್ಸ್ ಬಗ್ಗೆ ಜನರಿಗೆ 90ರ ದಶಕದಲ್ಲಿದ್ದಷ್ಟು ಆಸಕ್ತಿ ಈಗಿಲ್ಲವಂತೆ. ಫೇಸ್ ಬುಕ್ ಚಟುವಟಿಕೆಯಲ್ಲಿ ತೊಡಗಿರುವುದು, ಅತಿ ಹೆಚ್ಚು ಟಿವಿ ನೋಡುವುದು ಅಥವಾ ಕಾರ್ಯಕ್ರಮಗಳನ್ನು ನೋಡುವುದು ಜನರ ಸೆಕ್ಸ್ ಆಸಕ್ತಿ ಕುಸಿತಕ್ಕೆ ಕಾರಣವಂತೆ. ನಿಜ ಹೇಳಬೇಕೆಂದರೆ, ಯುವಕರಿಗಿಂತ 70ಕ್ಕಿಂತ ಅಧಿಕ ವಯಸ್ಸಿನವರು ಸೆಕ್ಸ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.