(ವಿಡಿಯೊ)ಸಿನಿಮಾಕ್ಕೆ ನಾಯಕಿ ಮಾಡ್ತೀನಿ ಎಂದು ಮಂಚಕ್ಕೆ ಕರೆದ ಕನ್ನಡ ಸಿನಿಮಾ ನಿರ್ಮಾಪಕ : ಆಮೇಲೇನಾಯ್ತು ?

Published : Mar 12, 2017, 04:05 PM ISTUpdated : Apr 11, 2018, 12:48 PM IST
(ವಿಡಿಯೊ)ಸಿನಿಮಾಕ್ಕೆ ನಾಯಕಿ ಮಾಡ್ತೀನಿ ಎಂದು ಮಂಚಕ್ಕೆ ಕರೆದ ಕನ್ನಡ ಸಿನಿಮಾ ನಿರ್ಮಾಪಕ : ಆಮೇಲೇನಾಯ್ತು ?

ಸಾರಾಂಶ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಾ.ರಾ.ಗೋವಿಂದ್ ನನಗೆ ತುಂಬಾ ಚೆನ್ನಾಗಿ ಗೊತ್ತು, ಅವರು ನಾನು ಹೇಳಿದಂತೆ ಕೇಳುತ್ತಾರೆ. ಅವರಿಗೆ ಹೇಳಿ ನಿಮಗೆ ಸಿನಿಮಾ ಚಾನ್ಸ್ ಕೊಡಿಸುತ್ತೆನೆ ಅಂತಾ ಅನೇಕ ಹುಡುಗಿಯರಿಗೆ ವಂಚಿಸಿದ್ದನಂತೆ.

ಬೆಂಗಳೂರು(ಮಾ.12): ಆತ ಒಂದು ಸಿನಿಮಾ ನಿರ್ಮಾಣ ಮಾಡಿ ಸಾಕಷ್ಟು ಮಂದಿಯ ಜತೆ ಗುರ್ತಿಸಿಕೊಂಡಿದ್ದ. ನಟ ನಟಿಯರ ಜತೆ ಪೋಟೋ ತೆಗೆಸಿಕೊಂಡು, ಅದರ ಬಲದಲ್ಲಿ ಸಂಘಟನೆ ಕಟ್ಟಿಕೊಂಡು, ಪ್ರತಿಭಟನೆ ಹೋರಾಟ ಅಂತಾ ಸದಾ ಸುದ್ದಿಯಾಗಿರ್ತಿದ್ದ. ಆದರೆ ಈಗ ಮತ್ತೆ ಸುದ್ದಿಯಾಗಿದ್ದು, ಆತನ ಇನ್ನೊಂದು ಮುಖವಾಡ ಕಳಚಿದೆ.

ಏನೋ ನಿನಗೆ ಬೇರೆಯವರ ಹೆಂಡತಿ ಬೇಕಾ. ಎಲ್ಲರಿಗೂ ನೀನು ಹಿರೋಯಿನ್ ಚಾನ್ಸ್ ಕೊಡಸ್ತೀಯಾ..? ಅಂತಾ ಹಿಗ್ಗಾಮಗ್ಗ  ಥಳಿಸುತ್ತಿರುವ ಜನರು ಇಲ್ಲಾ ಇಲ್ಲಾ ಮತ್ತೆ ಈ ರೀತಿ ಮಾಡಲ್ಲ ಪ್ಲೀಸ್ ಹೊಡಿಬೇಡಿ ಅಂತಾ ರಿಕ್ವೇಸ್ಟ್ ಮಾಡುತ್ತಿರುವ ಈ ಅಸಾಮಿ ವಿರೇಶ್ @ ವೀರು.

 ಇತ್ತಿಚೆಗೆ ಕನ್ನಡದಲ್ಲಿ ಬಂದ 'ಪ್ರೀತಿ ಮಾಯೇ ಹುಷಾರ್' ಎಂಬ ಸಿನಿಮಾದ ನಿರ್ಮಾಪಕ. ಅಲ್ಲದೇ ಕರುನಾಡ ಸುವರ್ಣ ವೇದಿಕೆಯ ರಾಜ್ಯಾಧ್ಯಕ್ಷ. ಹೀಗೆ ಸಾಕಷ್ಟು ಪ್ರಭಾವಿ ಮುಖಂಡನಾಗಿರುವ ಈತನಿಗೆ ಕಳೆದ ವಾರ 10 ಕ್ಕೂ ಹೆಚ್ಚು ಮಹಿಳೆಯರು ಮತ್ತು ಪುರುಷರು ಸೇರಿ ಚೆನ್ನಾಗಿ ವಾಂಚಿದ್ದಾರೆ. ಕಾರಣ ತನಿಗಿರುವ ಇಷ್ಟೆಲ್ಲಾ ಪವರ್ ಬಳಿಸಿಕೊಂಡಿರುವ ಈತ ಒಳ್ಳೆಯದು ಮಾಡದೇ ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ತಾನು ಮತ್ತೊಂದು ಹೊಸ ಸಿನಿಮಾ ಮಾಡ್ತಾ ಇದ್ದೆನೆ ಅದರಲ್ಲಿ ಹಿರೋಯಿನ್ ಮಾಡ್ತಿನಿ ಅಂತಾ ಬೇರೆಯವರ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದನಂತೆ. ಅಲ್ಲದೇ ಮನೆಯೊಳಗೆ ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದನಂತೆ. ಇದರಿಂದ ನೊಂದ ಮಹಿಳೆ ತಮ್ಮ ಪತಿ ಮತ್ತು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ. ವಿಷಯ ತಿಳಿದ ಆಕೆ ಕುಟುಂಬಸ್ಥರು ಮತ್ತು ಸ್ಥಳೀಯರು ಹೀಗೆ ಮುಟ್ಟಿ ನೋಡಿಕೊಳ್ಳುವಂತೆ ಧರ್ಮದೇಟು ಕೊಟ್ಟಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಾ.ರಾ.ಗೋವಿಂದ್ ನನಗೆ ತುಂಬಾ ಚೆನ್ನಾಗಿ ಗೊತ್ತು, ಅವರು ನಾನು ಹೇಳಿದಂತೆ ಕೇಳುತ್ತಾರೆ. ಅವರಿಗೆ ಹೇಳಿ ನಿಮಗೆ ಸಿನಿಮಾ ಚಾನ್ಸ್ ಕೊಡಿಸುತ್ತೆನೆ ಅಂತಾ ಅನೇಕ ಹುಡುಗಿಯರಿಗೆ ವಂಚಿಸಿದ್ದನಂತೆ. ಇಷ್ಟೆಲ್ಲಾ ಆದ ಬಳಿ ಆತನನ್ನು ಹೆಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರಿಗೆಗೆ ಈತನನ್ನು ಒಪ್ಪಿಸಲಾಗಿದೆ. ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ ಪೊಲೀಸರು ಈತನನ್ನು ಜೈಲಿಗೆ ಕಳುಹಿಸಿದ್ದಾರೆ. ಅಲ್ಲದೇ ಈತನ ಮೇಲೆ ಹಲ್ಲೆ ಮಾಡಿದ ನೊಂದ ಯುವತಿಯ ಮನೆಯವರ ವಿರುದ್ದ ಹಲ್ಲೆ ಕೇಸ್ ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸಿದ್ದಾರೆ.

ಪ್ರೀತಿ ಮಾಯೇ ಹುಷಾರ್ ಅಂತಾ ಸಿನಿಮಾ ಮಾಡಿ, ಎಲ್ಲರಿಗೂ ಮಾಯೇ ಹಚ್ಚಲು ಹೋಗಿದ್ದ ವಿರೇಶ್ ತನಗಿದ್ದ ಕಾಮುಕ ಮಾಯೆಯನ್ನು ಕಳಚಿಸಿಕೊಂಡಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್