ಕೆಮೋಥೆರಪಿ ಗೆದ್ದ ವರ್ಷದ ಮಗು: ಅಪ್ಪ ಸಂಭ್ರಮಿಸಿದ್ದು ಹೀಗೆ!

By Web DeskFirst Published Jul 27, 2018, 7:00 PM IST
Highlights

ಕಿಮೋಥೆರಪಿ ಪಾಸಾಗಿ ಬಂದ ಮಗು

ಡ್ಯಾನ್ಸ್ ಮಾಡಿ ಸ್ವಾಗತಿಸಿದ ಅಪ್ಪ

ಕಿಯಾರಾಳ  ‘ಲೆವಲ್ ಅಪ್’ ಹಾಡಿಗೆ ಸ್ಟೆಪ್

ಲಕೆಮಿಯಾ ಕ್ಯಾನ್ಸರ್ ನಿಂದ ಬಳಲುತ್ತಿರುವ ಕ್ರಿಸ್ಟಿಯನ್

ಅಪ್ಪನ ಡ್ಯಾನ್ಸ್ ನೋಡಿ ನೋವಲ್ಲಾ ಮರೆತ ಕಂದಮ್ಮ 

ಫಿಲಿಡೆಲ್ಫಿಯಾ(ಜು.27): ಇನ್ನೂ ಸರಿಯಾಗಿ ಅಪ್ಪ ಅನ್ನಲೂ ಬಾರದ ಈ ಪುಟ್ಟ ಕಂದಮ್ಮನಿಗೆ ಅದಾಗಲೇ ಕ್ಯಾನ್ಸರ್ ಎಂಬ ಮಹಾಮಾರಿ ಕಾಟ ಕೊಡುತ್ತಿದೆ. ಆದರೆ ಕ್ಯಾನ್ಸರ್ ಇದ್ರೆ ಏನಂತೆ ಪಕ್ಕದಲ್ಲಿ ಅಪ್ಪ ಇರುವಾಗ ಸಾವನ್ನು ಜಯಿಸಲು ನಾ ರೆಡಿ ಅಂತಿದೆ ಈ ಮಗು.

ಹೌದು, ಕ್ರಿಸ್ಟಿಯನ್ ಎಂಬ ಈ ಒಂದು ವರ್ಷದ ಮಗು ಲಕೆಮಿಯಾ ಕ್ಯಾನ್ಸರ್ ನಿಂದ ಬಳಲುತ್ತಿದೆ. ಕಳೆದ ವಾರವಷ್ಟೇ ಈ ಮಗು ಅತ್ಯಂತ ನೋವುಭರಿತ ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗಿದೆ.

ಕ್ರಿಸ್ಟಿಯನ್ ಗೆ ಮೊದಲ ಹಂತದ ಯಶಸ್ವಿ ಕಿಮೋಥೆರಪಿ ಚಿಕಿತ್ಸೆ ಬಳಿಕ, ವೈದ್ಯರು ಮಗುವನ್ನು ಮನೆಗೆ ಕರೆದುಕೊಂಡು ಹೋಗಬಹುದು ಎಂದು ಸೂಚಿಸಿದ್ದಾರೆ. ಇದಕ್ಕಾಗಿಯೇ ಕಾಯುತ್ತಿದ್ದ ಕ್ರಿಸ್ಟಿಯನ್ ತಂದೆ ಕೆನ್ನಿ ಥಾಮಸ್, ತನ್ನ ಮಗುವಿನ ಮುಂದೆ ಜಬರ್ ದಸ್ತ್ ಸ್ಟೆಪ್ ಹಾಕಿ ಸಂತಸ ಹಂಚಿಕೊಂಡಿದ್ದಾನೆ.

ಕೆನ್ನಿ ಥಾಮಸ್ ತನ್ನ ಮಗ ಕ್ರಿಸ್ಟಿಯನ್ ಮುಂದೆ ಪ್ರಸಿದ್ಧ ಗಾಯಕಿ ಕಿಯಾರಾ ಅವರ ‘ಲೆವಲ್ ಅಪ್’ ಹಾಡಿಗೆ ಆಸ್ಪತ್ರೆಯಲ್ಲಿ ಸ್ಟೆಪ್ ಹಾಕಿದ್ದಾನೆ. ಅಪ್ಪನ ಡ್ಯಾನ್ಸ್ ನೋಡಿ ಮಗು ಕ್ರಿಸ್ಟಿಯನ್ ಕಿಮೋಥೆರಪಿ ನೋವನ್ನೆಲ್ಲಾ ಮರೆತು ಕುಣಿದಾಡಿದೆ.

ಕೆನ್ನಿ ಥಾಮಸ್ ಮತ್ತು ಕ್ರಿಸ್ಟಿಯನ್ ನಡುವಿನ ಈ ಭಾಂಧವ್ಯ ಮತ್ತು ಥಾಮಸ್ ಅವರ ಡ್ಯಾನ್ಸ್ ಶೈಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಕ್ರಿಸ್ಟಿಯನ್ ಶೀಘ್ರ ಗುಣಮುಖವಾಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

click me!