ಟಾಟಾ ಜೊತೆ ಕಾನೂನು ಸಮರಕ್ಕಿಳಿದ ಮಿಸ್ತ್ರಿ

By Suvarna Web DeskFirst Published Dec 20, 2016, 4:09 PM IST
Highlights

‘‘ಇದು ಉದ್ಯಮ ಸಮೂಹದ ಹೋರಾಟವಲ್ಲ. ಒಂದು ವೇಳೆ ಆ ರೀತಿಯಾಗಿದ್ದರೆ, ನಾನು ಸ್ಥಾನದಲ್ಲಿ ಉಳಿಯಲು ಬಯಸುತ್ತಿದ್ದೆ" ಎಂದು ಮಿಸ್ತ್ರಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಮುಂಬೈ(ಡಿ.20): ಉದ್ಯಮಿ ರತನ್ ಟಾಟಾ ಅವರೊಂದಿಗೆ ಟಾಟಾ ಗ್ರೂಪ್‌'ನ ಪದಚ್ಯುತ ಅಧ್ಯಕ್ಷ ಸೈರಸ್ ಮಿಸ್ತ್ರಿ ರಾಜಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ತಮ್ಮ ಹಕ್ಕುಗಳಿಗಾಗಿ ಮಿಸ್ತ್ರಿ ಎಲ್ಲ ವಿಧದಲ್ಲೂ ಟಾಟಾ ಅವರೊಂದಿಗೆ ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ.

103 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಟಾಟಾ ಸಾಮ್ರಾಜ್ಯದಲ್ಲಿ ತಮ್ಮ ಕುಟುಂಬದ ಶೇ. 18.5 ಬಿಟ್ಟುಕೊಡದೆ ಹೋರಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧೀಕರಣದಲ್ಲಿ ಪ್ರಕರಣ ದಾಖಲಿಸುವ ಮೂಲಕ ಟಾಟಾ ಜೊತೆ ಮಿಸ್ತ್ರಿ ಕಾನೂನು ಸಮರಕ್ಕಿಳಿದಿದ್ದಾರೆ.

‘‘ಇದು ಉದ್ಯಮ ಸಮೂಹದ ಹೋರಾಟವಲ್ಲ. ಒಂದು ವೇಳೆ ಆ ರೀತಿಯಾಗಿದ್ದರೆ, ನಾನು ಸ್ಥಾನದಲ್ಲಿ ಉಳಿಯಲು ಬಯಸುತ್ತಿದ್ದೆ" ಎಂದು ಮಿಸ್ತ್ರಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ತಾವು ಕಾನೂನು ಸಮರದಲ್ಲಿ ಸೋತರೆ, ಟಾಟಾ ಸಮೂಹದಲ್ಲಿ ತಮ್ಮ ಕುಟುಂಬದ ಪಾಲಿನಿಂದ ಹೊರ ನಡೆಯುವುದೇ? ಎಂಬ ಪ್ರಶ್ನೆಗೆ ಮಿಸ್ತ್ರಿ ಋಣಾತ್ಮಕ ಉತ್ತರ ನೀಡಿದರು. ಟಾಟಾ ಸಮೂಹದಲ್ಲಿ ಮಿಸ್ತ್ರಿ ಕುಟುಂಬದ 1 ಟ್ರಿಲಿಯನ್ ಆಸ್ತಿ ಇದ್ದು, ಅದು ಟಾಟಾ ಸಮೂಹದ ಒಟ್ಟು ಮೌಲ್ಯದ ಶೇ. 18.4ರಷ್ಟಾಗುತ್ತದೆ.

click me!