ಲಕ್ಷ ದ್ವೀಪದಲ್ಲಿಯೂ ಓಖಿ ಅಬ್ಬರ : ಧರೆಗುರುಳಿದ ಮರಗಳು, ಮನೆಗಳಿಗೂ ಹಾನಿ

Published : Dec 02, 2017, 03:08 PM ISTUpdated : Apr 11, 2018, 01:13 PM IST
ಲಕ್ಷ ದ್ವೀಪದಲ್ಲಿಯೂ ಓಖಿ ಅಬ್ಬರ : ಧರೆಗುರುಳಿದ ಮರಗಳು, ಮನೆಗಳಿಗೂ ಹಾನಿ

ಸಾರಾಂಶ

ಭಾರೀ ಬಿರುಗಾಳಿ ಹಾಗೂ ಮಳೆಯಿಂದ ಅನೇಕ ಮನೆಗಳಿಗೆ ಹಾನಿಯುಂಟಾಗಿದ್ದು, ತೆಂಗಿನ ಮರಗಳು ಧರೆಗೆ ಉರುಳಿವೆ. ಅಲ್ಲದೇ ಐದು  ಮೀನುಗಾರಿಕಾ ಬೋಟ್’ಗಳು ಸಂಪೂರ್ಣ ಹಾನಿಗೊಳಗಾಗಿವೆ. ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಸಾರಿಗೆ – ಸಂಪರ್ಕಕ್ಕೂ ಕೂಡ ಸಮಸ್ಯೆ ಎದುರಾಗಿದೆ.

ಲಕ್ಷದ್ವೀಪ(ಡಿ.2) : ಇತ್ತ ತಮಿಳುನಾಡು ಹಾಗೂ ಕೇರಳದಲ್ಲಿ ಅಬ್ಬರಿಸುತ್ತಿರುವ  ಓಖಿ ಇದೀಗ ಲಕ್ಷದ್ವೀಪದತ್ತಲೂ ಮುಖ ಮಾಡಿದೆ.

ಭಾರೀ ಬಿರುಗಾಳಿ ಹಾಗೂ ಮಳೆಯಿಂದ ಅನೇಕ ಮನೆಗಳಿಗೆ ಹಾನಿಯುಂಟಾಗಿದ್ದು, ತೆಂಗಿನ ಮರಗಳು ಧರೆಗೆ ಉರುಳಿವೆ. ಅಲ್ಲದೇ ಐದು  ಮೀನುಗಾರಿಕಾ ಬೋಟ್’ಗಳು ಸಂಪೂರ್ಣ ಹಾನಿಗೊಳಗಾಗಿವೆ. ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಸಾರಿಗೆ – ಸಂಪರ್ಕಕ್ಕೂ ಕೂಡ ಸಮಸ್ಯೆ ಎದುರಾಗಿದೆ.

ಗಾಳಿಯ ವೇಗ 100ರಿಂದ 110 ಕಿ.ಮೀಟರ್’ಗಳಷ್ಟು ಇದ್ದು, ಕಳೆದ 24 ಗಂಟೆಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ.

ಕಲ್ಪೇನಿ ದ್ವೀಪ ಪ್ರದೇಶದಲ್ಲಿ ನೀರಿನ  ಮಟ್ಟ ಹೆಚ್ಚಳವಾಗಿದ್ದು,  ಮುಂದಿನ 24  ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. 130 ರಿಂದ 145 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ