ರಾಷ್ಟ್ರಪತಿ ಭಾಷಣದಲ್ಲಿ ಟಿಪ್ಪುವಿನ ಗುಣಗಾನ; ಆರ್'ಟಿಐನಿಂದ ಬಯಲಾಯ್ತು ಭಾಷಣದ ಹಿಂದಿನ 'ಕೈ'?

By Suvarna Web DeskFirst Published Dec 2, 2017, 2:51 PM IST
Highlights

ಕನ್ನಡಿಗ ಪಿ ಆದಿತ್ಯ ನಾರಾಯಣ್ ಸಲ್ಲಿಸಿದ್ದ ಮಾಹಿತಿ ಹಕ್ಕು ಪ್ರಶ್ನೆಗೆ ರಾಷ್ಟ್ರಪತಿ ಭವನದಿಂದ ಉತ್ತರ ಸಿಕ್ಕಿದೆ. ಸುವರ್ಣ ನ್ಯೂಸ್'ಗೆ ರಾಷ್ಟ್ರಪತಿ ಭವನದ ಪತ್ರದ ಪ್ರತಿ ಲಭ್ಯವಾಗಿದೆ.

ಬೆಂಗಳೂರು(ಡಿ.02): ಟಿಪ್ಪು ಸುಲ್ತಾನ್ ಹೊಗಳುವ ಮೂಲಕ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿದ್ದ ರಾಷ್ಟ್ರಪತಿ ರಾಮ್'ನಾಥ್ ಕೋವಿಂದ ಅವರಿಗೆ ಭಾಷಣ ಸಿದ್ದಪಡಿಸಿದ್ದು ಯಾರು ಎನ್ನುವುದು ಮಾಹಿತಿ ಆರ್'ಟಿಐ ಕಾರ್ಯಕರ್ತ ಸಲ್ಲಿಸಿದ್ದ ಅರ್ಜಿಯಿಂದ ಬಯಲಾಗಿದೆ.

ಕಳೆದ ತಿಂಗಳ ವಿಧಾನಸೌಧ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ ನಾಡಿದ ನೆಲ,ಜಲ, ಸಂಸ್ಕೃತಿ ಹಾಗೂ ಸ್ವಾತಂತ್ರ ಹೋರಾಟಗಾರರನ್ನು ಕೊಂಡಾಡುವ ವೇಳೆ ಮೈಸೂರು ಹುಲಿ ಎಂದೇ ಕರೆಯಲ್ಪಡುವ ಟಿಪ್ಪು ಸುಲ್ತಾನ್ ಅವರನ್ನು ಕ್ಷಿಪಣಿಗಳ ಜನಕ, ಅದನ್ನು ಯೂರೋಪಿಯ್ನರು ಅಳವಡಿಸಿಕೊಂಡಿದ್ದರು. ಹಾಗೆಯೇ ಟಿಪ್ಪು ಬ್ರಿಟೀಷರ ವಿರುದ್ಧ ಹೋರಾಡುತ್ತಲೇ ವೀರೋಚಿತ ಮರಣವನ್ನಪ್ಪಿದ್ದ ಎಂದು ಹೇಳಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಕನ್ನಡಿಗ ಪಿ ಆದಿತ್ಯ ನಾರಾಯಣ್ ಸಲ್ಲಿಸಿದ್ದ ಮಾಹಿತಿ ಹಕ್ಕು ಪ್ರಶ್ನೆಗೆ ರಾಷ್ಟ್ರಪತಿ ಭವನದಿಂದ ಉತ್ತರ ಸಿಕ್ಕಿದೆ. ಸುವರ್ಣ ನ್ಯೂಸ್'ಗೆ ರಾಷ್ಟ್ರಪತಿ ಭವನದ ಪತ್ರದ ಪ್ರತಿ ಲಭ್ಯವಾಗಿದೆ.

ಭಾಷಣದ ಪ್ರತಿ ರಾಷ್ಟ್ರಪತಿ ಭವನದಲ್ಲೇ ಸಿದ್ದವಾಗಿತ್ತು ಎಂದು ರಾಜ್ಯ ಸರ್ಕಾರ ಹೇಳಿತ್ತು. ರಾಷ್ಟ್ರಪತಿ ಭಾಷಣಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ಸರ್ಕಾರ ಪ್ರತಿಕ್ರಿಯೆ ನೀಡಿತ್ತು. ಆದರೆ ಭಾಷಣಕ್ಕೆ ಮೂಲ ಮಾಹಿತಿ ಕರಡು ಒದಗಿಸಿದ್ದು ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿಧಾನಸಭೆ ಸಚಿವಾಲಯ ಎಂಬ ಮಾಹಿತಿ ಬಯಲಾಗಿದೆ. ಕರಡು ಮಾಹಿತಿ ಆಧಾರದಲ್ಲೇ ಅಂತಿಮ ಭಾಷಣ ಸಿದ್ದಪಡಿಸಿದ್ದು ರಾಷ್ಟ್ರಪತಿ ಸೆಕ್ರೇಟರಿಯೇಟ್ ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.

click me!