ಒಮಾನ್ ನತ್ತ ತಿರುಗಿದ ಕ್ಯಾರ್; ಮೀನುಗಾರರಿಗೆ ಐಎಂಡಿ ಸೂಚನೆ

Published : Oct 27, 2019, 08:50 AM IST
ಒಮಾನ್ ನತ್ತ ತಿರುಗಿದ ಕ್ಯಾರ್; ಮೀನುಗಾರರಿಗೆ ಐಎಂಡಿ ಸೂಚನೆ

ಸಾರಾಂಶ

ಕರ್ನಾಟಕ, ಗೋವಾ ಕರಾವಳಿಯಲ್ಲಿ ಭಾರಿ ಮಳೆ ಸುರಿಸುತ್ತಿರುವ ‘ಕ್ಯಾರ್’ ಚಂಡಮಾರುತ ಪಶ್ಚಿಮ ಸಮುದ್ರದಿಂದ ದೂರ ಚಲಿಸುತ್ತಿದ್ದು, ಈ ಭಾಗಗಳಲ್ಲಿ ಮಳೆಯ ಪ್ರಮಾಣ ತಗ್ಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ನವದೆಹಲಿ (ಅ. 27): ಕರ್ನಾಟಕ, ಗೋವಾ ಕರಾವಳಿಯಲ್ಲಿ ಭಾರಿ ಮಳೆ ಸುರಿಸುತ್ತಿರುವ ‘ಕ್ಯಾರ್’ ಚಂಡಮಾರುತ ಪಶ್ಚಿಮ ಸಮುದ್ರದಿಂದ ದೂರ ಚಲಿಸುತ್ತಿದ್ದು, ಈ ಭಾಗಗಳಲ್ಲಿ ಮಳೆಯ ಪ್ರಮಾಣ ತಗ್ಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಆದರೆ, ಇದಕ್ಕೂ ಮುನ್ನ ಪ್ರತೀ ಗಂಟೆಗೆ 40- 50 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಕ್ಯಾರ್ ಚಂಡ ಮಾರುತದ ಪರಿಣಾಮದಿಂದ ಕರ್ನಾಟಕದ ಉತ್ತರ-ದಕ್ಷಿಣ ಒಳನಾಡು ಮತ್ತು ಕರಾವಳಿ ತೀರ ಸೇರಿದಂತೆ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದ ಮಳೆ ಸುರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಹಾವೇರಿ: ನಿರಂತರ ಮಳೆಗೆ ಕಳೆಗುಂದಿದ ಮಾರುಕಟ್ಟೆ: ಸಂಕಷ್ಟದಲ್ಲಿ ಅನ್ನದಾತ

ಆದರೆ, ಸದ್ಯ, ರತ್ನಗಿರಿಯ ಪಶ್ಚಿಮ ದಿಕ್ಕಿನಿಂದ 190 ಕಿ.ಮೀ. ಹಾಗೂ ಮುಂಬೈನ ದಕ್ಷಿಣ- ನೈಋತ್ಯ ದಿಕ್ಕಿನಿಂದ 330 ಕಿ.ಮೀ. ದೂರದಲ್ಲಿರುವ ಕ್ಯಾರ್ ಚಂಡಮಾರುತ ಇದೀಗ ಪಶ್ಚಿಮ ಸಮುದ್ರದಿಂದ ದೂರದಲ್ಲಿ ಚಲಿಸುತ್ತಿದೆ. ಒಮಾನ್ ಕರಾವಳಿಯತ್ತ ಮುಖ ಮಾಡಿದೆ ಎಂದು ತಿಳಿಸಲಾಗಿದೆ. ಆದಾಗ್ಯೂ, ಅರಬ್ಬಿ ಸಮುದ್ರದಲ್ಲಿ ಕ್ಯಾರ್ ಅಬ್ಬರವಿರುವ ಹಿನ್ನೆಲೆ ಕರಾವಳಿ ಕಾವಲು ಪಡೆ ಮೀನುಗಾರರ ರಕ್ಷಣಾ ಕಾರ್ಯಾಚರಣೆಗೆ ಇಳಿದಿದೆ. ಈವರೆಗೆ 19 ಮೀನುಗಾರರು ಹಾಗೂ 2100 ಮೀನುಗಾರಿಕಾ ಬೋಟುಗಳನ್ನು ವಿವಿಧ ಬಂದರುಗಳಿಗೆ ಸುರಕ್ಷಿತವಾಗಿ ಕರೆತಂದಿದೆ.

ಕುಷ್ಟಗಿ: ಕುಸಿದ ಬೆಲೆ, ರೈತರ ಕಣ್ಣಲ್ಲಿ ಕಣ್ಣೀರು ತರಿಸುತ್ತಿರುವ ಈರುಳ್ಳಿ!

ಇದಲ್ಲದೆ ಡಾರ್ನಿಯರ್ ವಿಮಾನ ಬಳಸಿ ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿರ ಬ ಹುದಾದ ಮೀನುಗಾರಿಕಾ ದೋಣಿಗಳಿಗಾಗಿ ಶೋಧ ನಡೆಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ