ಕಾಂಗ್ರೆಸ್‌ಗೆ ಗಾಂಧಿ ಕುಟುಂಬ ಹೊರತಾದ ಅಧ್ಯಕ್ಷ? ರಾಹುಲ್ ಕೊಟ್ಟ ಶಾಕ್!

Published : May 26, 2019, 09:39 AM IST
ಕಾಂಗ್ರೆಸ್‌ಗೆ ಗಾಂಧಿ ಕುಟುಂಬ ಹೊರತಾದ ಅಧ್ಯಕ್ಷ? ರಾಹುಲ್ ಕೊಟ್ಟ ಶಾಕ್!

ಸಾರಾಂಶ

ಗಾಂಧಿ ಕುಟುಂಬ ಹೊರತಾದ ನಾಯಕ: ರಾಹುಲ್‌ ಶಾಕ್‌!| ಸೋಲಿನ ಹೊರತೂ ರಾಹುಲ್‌ ಮೇಲೆ ವಿಶ್ವಾಸ| - ಸಿಡಬ್ಲ್ಯುಸಿ ಸಭೆಗೆ ರಾಹುಲ್‌ ರಾಜೀನಾಮೆ ಸಲ್ಲಿಕೆ, ಗಾಂಧೀ ಕುಟುಂಬ ಹೊರತಾದ ಅಧ್ಯಕ್ಷರ ಆಯ್ಕೆಗೆ ಮನವಿ|  ರಾಜೀನಾಮೆ ತಿರಸ್ಕರಿಸಿ, ಪಕ್ಷ ಮರು ಸಂಘಟಿಸಲು ಅಧ್ಯಕ್ಷ ರಾಹುಲ್‌ ಗಾಂಧಿಗೆ ಸಿಡಬ್ಲ್ಯುಸಿ ಪೂರ್ಣ ಅಧಿಕಾರ

ನವದೆಹಲಿ[ಮೇ.26]: ಗಾಂಧೀ ಕುಟುಂಬಕ್ಕೆ ಹೊರತಾದ ವ್ಯಕ್ತಿಯೊಬ್ಬರನ್ನು, ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿ ಎಂಬ ರಾಹುಲ್‌ ಗಾಂಧಿ ಮಾಡಿದ ಮನವಿ, ಸಿಡಬ್ಲುಸಿ ಸಭೆಯಲ್ಲಿ ಭಾಗಿಯಾಗಿದ್ದ ಬಹುತೇಕ ನಾಯಕರನ್ನು ಒಮ್ಮೆ ದಿಗ್ಭ್ರಾಂತರನ್ನಾಗಿ ಮಾಡಿತು ಎನ್ನಲಾಗಿದೆ.

ಕಾಂಗ್ರೆಸ್‌, ಗಾಂಧೀ ಕುಟುಂಬದ ಸ್ವತ್ತಾಗಿದೆ ಎಂದು ವಿಪಕ್ಷಗಳು ಹಲವು ಬಾರಿ ಆರೋಪ ಮಾಡಿದ್ದವಾದರೂ, ಅದಕ್ಕೆ ಎಂದಿಗೂ ಗಾಂಧೀ ಕುಟುಂಬ ನೇರವಾಗಿ ಸ್ಪಷ್ಟನೆ ಅಥವಾ ತಿರುಗೇಟು ನೀಡಿದ ಉದಾಹರಣೆ ಕಡಿಮೆ. ಜೊತೆಗೆ ಸ್ವತಃ ಗಾಂಧೀ ಕುಟುಂಬದ ಸದಸ್ಯರೊಬ್ಬರೇ, ನಮ್ಮ ಕುಟುಂಬಕ್ಕೆ ಹೊರತಾದ ನಾಯಕರ ಆಯ್ಕೆ ಮಾಡಿ ಎಂದು ಬಹಿರಂಗವಾಗಿ ಹೇಳಿದ ಉದಾಹರಣೆಗಳೂ ಕಡಿಮೆ.

ಸೋಲಿನ ಹೊರತೂ ರಾಹುಲ್‌ ಮೇಲೆ ವಿಶ್ವಾಸ

ಇಂಥದ್ದರಲ್ಲಿ ರಾಹುಲ್‌ ಏಕಾಏಕಿ ಇಂಥದ್ದೊಂದು ಗಂಭೀರ ವಿಷಯವನ್ನು ಪ್ರಸ್ತಾಪ ಮಾಡಿದ್ದು ರಾಜಕೀಯ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದ ಈ ರೈಲಿನಲ್ಲಿ ಊಟಕ್ಕೆ ದುಡ್ಡೇ ಬೇಡ! ಇದು ಉಚಿತ ಊಟ ನೀಡುವ ದೇಶದ ಏಕೈಕ ರೈಲು, ನೀವು ಪ್ರಯಾಣಿಸಿದ್ದೀರಾ?
ಮನ್ರೆಗಾ ಹೆಸರು ಬದಲಿಸಲು ಇಚ್ಛಿಸಿದ ಮೋದಿ ಸರ್ಕಾರ, ಇನ್ಮುಂದೆ ಇದು VBGRAMG!