ಬೊಮ್ಮೂರು ಅಗ್ರಹಾರದ ವಿವಾದಿತ ಸ್ಥಳದ ಬಳಿ ನಿಷೇಧಾಜ್ಞೆ ಜಾರಿ

Published : Jan 10, 2018, 10:23 AM ISTUpdated : Apr 11, 2018, 12:57 PM IST
ಬೊಮ್ಮೂರು ಅಗ್ರಹಾರದ ವಿವಾದಿತ ಸ್ಥಳದ ಬಳಿ ನಿಷೇಧಾಜ್ಞೆ ಜಾರಿ

ಸಾರಾಂಶ

ನೆನ್ನೆ ಗ್ರಾಮದ ವಿವಾದಿತ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಮುಂದಾಗಿರುವುದರಿಂದ  ನಿರ್ಮಾಣವಾಗಿದ್ದ  ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು,  ಶ್ರೀರಂಗಪಟ್ಟಣ ತಾಲೂಕಿನ ಬೊಮ್ಮೂರು ಅಗ್ರಹಾರದ ವಿವಾದಿತ ಸ್ಥಳದ ಬಳಿ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. 

ಮಂಡ್ಯ (ಜ.10): ನೆನ್ನೆ ಗ್ರಾಮದ ವಿವಾದಿತ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಮುಂದಾಗಿರುವುದರಿಂದ  ನಿರ್ಮಾಣವಾಗಿದ್ದ  ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು,  ಶ್ರೀರಂಗಪಟ್ಟಣ ತಾಲೂಕಿನ ಬೊಮ್ಮೂರು ಅಗ್ರಹಾರದ ವಿವಾದಿತ ಸ್ಥಳದ ಬಳಿ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. 

ಜ. 09  ರಿಂದ ಜ. 31 ರವರೆಗೆ ವಿವಾದಿತ ಸ್ಥಳದ 500 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.  ವಿವಾದಿತ ಸ್ಥಳದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್  ಮಾಡಲಾಗಿದೆ.  ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಘಟನೆ?
ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ‌ ಮಸೀದಿ ನಿರ್ಮಾಣಕ್ಕೆ ಮುಂದಾದ ಮುಸ್ಲಿಂರ ವಿರುದ್ಧ  ಸ್ಥಳೀಯ ಗ್ರಾಮದ ಹಿಂದೂಗಳು ಸಿಡಿದೆದ್ದಿದ್ದಾರೆ. ಇದರಿಂದಾಗಿ  ಗ್ರಾಮದಲ್ಲಿ ಉದ್ವಿಗ್ನ  ಸ್ಥಿತಿ‌ ನಿರ್ಮಾಣವಾಗಿದೆ. ಇಲ್ಲಿನ  ಶ್ರೀರಂಗಪಟ್ಟಣ ತಾಲೂಕಿನ ಬೊಮ್ಮೂರು ಅಗ್ರಹಾರ ಗ್ರಾಮದಲ್ಲಿ ಕಳೆದ ಐದು ವರ್ಷಗಳ ಹಿಂದೆ ಅನಾಥ ಮುಸ್ಲಿಂ ಬಾಲಕರ ಶಾಲೆ ನಡೆಸುವುದಾಗಿ ಮುಸ್ಲಿಂ ಸಂಸ್ಥೆಯೊಂದು ಅನುಮತಿ ಪಡೆದುಕೊಂಡಿತ್ತು. ಈ ಸ್ಥಳದಲ್ಲಿ ಈಗಾಗಲೇ ಮುಸ್ಲಿಂ ಅನಾಥ ಮಕ್ಕಳ ಶಾಲೆ ಇದ್ದು, ಈ ಶಾಲೆ ನಡೆಸುತ್ತಿದ್ದ  ಸಂಸ್ಥೆಯ ಮುಸ್ಲಿಂ ಮುಖಂಡರು ರಾತ್ರೋ ರಾತ್ರಿ ಗ್ರಾಮದಲ್ಲಿ‌ ಗ್ರಾ.ಪಂ. ಲೈಸನ್ಸ್ ಪಡೆಯದೆ ಶಾಲೆ ಕಟ್ಟಡದ ಹೆಸರಲ್ಲಿ ಮಸೀದಿ ನಿರ್ಮಾಣಕ್ಕೆ ಮುಂದಾದರು.  ಇದು ಈಗ ಸ್ಥಳೀಯ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ಶಬರಿಮಲೆ: ಚಿನ್ನದ ಬಳಿಕ ಪಡಿಪೂಜೆ ಕಾಣಿಕೆ ಹಂಚಿಕೆಯಲ್ಲಿಯೂ ಭ್ರಷ್ಟಾಚಾರದ ಶಂಕೆ?
Karnataka News Live: ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಎಲೆಕ್ಷನ್‌: ಬಿಜೆಪಿ-ದಳ ಮೈತ್ರಿಗೆ ಜಯ