
ನವದೆಹಲಿ : ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಫೆ.14 ರಂದು ಉಗ್ರರ ದಾಳಿ ನಡೆದಿದ್ದು, ಅಂದು 44 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಉಗ್ರ ಸ್ಫೋಟಕ ತುಂಬಿದ್ದ ಕಾರನ್ನು ಯೋಧರು ತೆರಳುತ್ತಿದ್ದ ಬಸ್ ಗೆ ಡಿಕ್ಕಿಯಾಗಿಸಿ ಈ ದುರಂತ ಸಂಭವಿಸಿತ್ತು.
ಈ ಘಟನೆಗೂ ಒಂದು ನಿಮಿಷ ಮೊದಲು CRPF ಯೋಧ ಸುಕ್ ಜಿಂದರ್ ಸಿಂಗ್ ಅವರ ಪತ್ನಿಗೆ ವಿಡಿಯೋ ಒಂದನ್ನು ಕಳುಹಿಸಿದ್ದರು.
ಪಾಕ್‌ನಿಂದ ಯುದ್ಧ ಸಿದ್ಧತೆ; ಸೈನಿಕರಿಗೆ ಅಲರ್ಟ್
CRPF ಯೋಧರು ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದ ವೇಳೆ ವಿಡಿಯೋ ಮಾಡಿ ತಮ್ಮ ಪತ್ನಿಗೆ ಕಳುಹಿಸಿದ್ದರು. ಆದರೆ ಸಿಂಗ್ ಅವರು ಈ ವಿಡಿಯೋ ಕಳುಹಿಸಿದ ದಿನ ಅದನ್ನು ನೋಡಿರಲಿಲ್ಲ. ಆದರೆ ದಾಳಿ ನಡೆದ ಮರುದಿನ ಅವರ ಪತ್ನಿ ಈ ವಿಡಿಯೋ ವೀಕ್ಷಿಸಿದ್ದರು.
ಸಿಂಗ್ ಅವರಿಂದ ಬಂದ ಕೊನೆಯ ವಿಡಿಯೋ ಇದಾಗಿದ್ದು, ಈ ದಾಳಿಯ ಬಳಿಕ ಮಾಧ್ಯಮಗಳೊಂದಿಗೆ ಅವರ ಪತ್ನಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಂಪೂರ್ಣ ಮಂಜುಕವಿದ ಹೆದ್ದಾರಿ ಹಾಗೂ ತಮ್ಮ ಮುಖವನ್ನು ಚಿತ್ರಿಸಿ ಕಳುಹಿಸಿದ್ದಾರೆ.
ಯೋಧ ಗುರು ತಿಥಿ ವೆಚ್ಚ ಭರಿಸುವೆ: ತಮ್ಮಣ್ಣ
ತಮ್ಮ 19ನೇ ವಯಸ್ಸಿನಲ್ಲೇ 2003ರಲ್ಲಿ ಸೇನಾಪಡೆಗೆ ಸೇರಿದ್ದ ಸಿಂಗ್ ಇದೀಗ ಹೆಡ್ ಕಾನ್ಸ್ ಟೇಬಲ್ ಆಗಿ ಬಡ್ತಿ ಹೊಂದಿದ್ದರು.
ಕಳೆದ 2 ದಶಕಗಳಲ್ಲೇ ಸೇನಾ ಪಡೆಯ ಮೇಲೆ ನಡೆದ ಅತ್ಯಂತ ಭಯಾನಕ ದಾಳಿಯಲ್ಲಿ ಸಿಂಗ್ ಹುತಾತ್ಮರಾಗಿದ್ದು, 7 ತಿಂಗಳ ಪುಟ್ಟ ಮಗು, ತಂದೆ ತಾಯಿ ಹಾಗೂ ಪತ್ನಿಯನ್ನು ಅಗಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ