ಏರ್ ಶೋ ನಲ್ಲಿ ಇವುಗಳನ್ನು ಮಿಸ್ ಮಾಡಿಕೊಳ್ಳಬೇಡಿ

By Web DeskFirst Published Feb 23, 2019, 8:52 AM IST
Highlights

‘ಏರೋ ಇಂಡಿಯಾ’ ಪ್ರದರ್ಶನದಲ್ಲಿ ಲೋಹದ ಹಕ್ಕಿಗಳ ಚಮತ್ಕಾರ, ವಸ್ತು ಪ್ರದರ್ಶನಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಫೆ.23 ರಿಂದ ಪ್ರವೇಶಾವಕಾಶ ಲಭ್ಯವಾಗಲಿದೆ. ಏರ್ ಶೋ ಗೆ ತೆರಳಿದ ಮೇಲೆ ಇಲ್ಲಿನ ಅವಕಾಶಗಳನ್ನು ಮಿಸ್ ಮಾಡಿಕೊಳ್ಳದಿರಿ. 

ಏರ್ ಶೋ ನಲ್ಲಿ  ಇವುಗಳನ್ನು  ಮಿಸ್ ಮಾಡಿಕೊಳ್ಳಬೇಡಿ 

* ಕಾಕ್‌ಪಿಟ್‌ನಲ್ಲಿ ಕುಳಿತು ಯುದ್ಧ ವಿಮಾನ ಓಡಿಸಿ ಪ್ರದರ್ಶನ ಮಳಿಗೆ ಪಾಸ್ ಹೊಂದಿರುವವರಿಗೆ ಹಲವು ಮಳಿಗೆಗಳು ಯುದ್ಧ ವಿಮಾನಗಳ ಸಿಮ್ಯುಲೇಟರ್ ಗಳ ಮೂಲಕ ವಿಮಾನ ಓಡಿಸುವ ಅನುಭವ ನೀಡಲು ಕಾತುರವಾಗಿವೆ.

* ಹಾಲ್-ಇ ನಲ್ಲಿರುವ ಎಚ್‌ಎಎಲ್ ಮಳಿಗೆಯಲ್ಲಿ ಅತ್ಯಾಧುನಿಕ ತೇಜಸ್ ಎಸ್‌ಸಿಎ-ಎಂಕೆ-1 ಎ ಯುದ್ಧ ವಿಮಾನದ ಅತ್ಯಾಧುನಿಕ ಸಿಮ್ಯುಲೇಟರ್ ವ್ಯವಸ್ಥೆ ಮಾಡಲಾಗಿದೆ. ಜಿಪಿಎಸ್ ಆಧಾರದ ವಿಮಾನದ ಮೂಲಕ ವಾಸ್ತವವಾಗಿಯೇ ವಿಮಾನ ಓಡಿಸಿದ ಅನುಭವ ಪಡೆಯಬಹುದು.  

* ‘ಹಾಲ್-ಡಿ’ನಲ್ಲಿರುವ ಡಿಆರ್‌ಡಿಒ ಮಳಿಗೆಯಲ್ಲಿ ಎಲ್ ಸಿಎ ತೇಜಸ್‌ನ ಅತ್ಯಾಧುನಿಕ ಸಿಮ್ಯುಲೇಟರ್ ಅಳವಡಿಕೆ ಮಾಡಿದ್ದು ‘360 ಡಿಗ್ರಿ’ ವಿನ್ಯಾಸಗಳಲ್ಲಿ ವಿಮಾನವನ್ನು ಓಡಿಸುವ ಅನುಭವ ಪಡೆಯಬಹುದು. ಉಳಿದಂತೆ, ಹಾಲ್-ಎಬಿ ನಲ್ಲಿರುವ ರಫೇಲ್ ಸಿಮ್ಯುಲೇಟರ್, ಬ್ರಹ್ಮೋಸ್ ಮಿಸೈಲ್ ಹೊಡೆಯುವ ಸಿಮ್ಯುಲೇಟರ್ ಅನುಭವ ಪಡೆಯಬಹುದು.

* ವಿಮಾನಗಳ 3-ಡಿ ದಾಳಿಗೆ ಗುರಿಯಾಗಿ! ಎಚ್‌ಎಎಲ್ ಪ್ರದರ್ಶನ ಮಳಿಗೆ (ಇ) ಹಾಲ್‌ನ ಇ.4 ವರ್ಚುಯಲ್ ಟೈಂ ಇಮೇಜಿಂಗ್ ತಂತ್ರಜ್ಞಾನ ಬಳಕೆ ಮಾಡಿ ನಿಮ್ಮ ಮೇಲೆ 3 -ಡಿ ವಿಮಾನಗಳ ದಾಳಿ ನಡೆಯಲಿದೆ. ಮನೊರಂಜನೆಗಾಗಿ ಎಚ್‌ಎಎಲ್ ನೀಡಿರುವ ಈ ವೇದಿಕೆ ಮಿಸ್ ಮಾಡಿಕೊಳ್ಳಬೇಡಿ.

* ಶಾಪಿಂಗ್‌ಗೂ ಅವಕಾಶ ಉಂಟು ಶಾಪಿಂಗ್, ಊಟ-ತಿಂಡಿ ವ್ಯವಸ್ಥೆಯನ್ನೂ ಏರ್ ಶೋನಲ್ಲಿ ಕಲ್ಪಿಸಿದ್ದು ಭಾರತೀಯ ವಾಯು ಪಡೆಯ ಕ್ಷೇಮಾಭಿವೃದ್ಧಿ ಸಂಘ ಹಾಗೂ ಎಚ್‌ಎಎಲ್ ಕುಟುಂಬಗಳ ಕ್ಷೇಮಾಭಿವೃದ್ಧಿ ಸಂಘದ ಎರಡು ಶಾಪಿಂಗ್ ಮಳಿಗೆಗಳಿವೆ. ಇಲ್ಲಿ ಸುಖೋಯ್, ಜಾಗ್ವಾರ್, ಮಿಗ್-21 , ಸೂರ್ಯಕಿರಣ್ ಹೀಗೆ ಹತ್ತಾರು ಆಟದ ಸಾಮಗ್ರಿ ಇವೆ. ಅದಲ್ಲದೆ, ಗೃಹಾಲಂಕಾರಿಕ ವಸ್ತುಗಳು, ಮಕ್ಕಳ ಬಟ್ಟೆ, ಪೈಲಟ್‌ಗಳಿಗೆ ಅಗತ್ಯವಾದ ವಸ್ತುಗಳೆಲ್ಲಾ ಇಲ್ಲಿ ಲಭ್ಯ.

* ಸೆಲ್ಫಿ ಪಾಯಿಂಟ್, ಕಾಕ್‌ಪಿಟ್ ಏರುವ ಅವಕಾಶ ಸ್ಥಿರ ಪ್ರದರ್ಶನ ಸ್ಥಳದಲ್ಲಿ ಭಾರತರದ ಹೆಮ್ಮೆಯ ತೇಜಸ್ ವಿಮಾನ, ಫ್ರಾನ್ಸ್‌ನ ರಾಫೇಲ್ ಹಾಗೂ ಸ್ವೀಡನ್ ಗ್ರಿಪ್ಪನ್ ಯುದ್ಧ ವಿಮಾನಗಳು, ಬ್ರಮ್ಮೋಸ್ ಕ್ಷಿಪಣಿ, ಎಚ್ ಎಎಲ್ ಹೆಲಿಕಾಪ್ಟರ್‌ಗಳ ಮುಂದೆ ನಿಂತು ಸೆಲ್ಫೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

* ಸಾರಂಗ್, ಸೂರ್ಯಕಿರಣ್ ಪ್ರದರ್ಶನ ಮಿಸ್ ಮಾಡಿಕೊಳ್ಳಬೇಡಿ ವೈಮಾನಿಕ ಪ್ರದರ್ಶನ ವೀಕ್ಷಿಸಲೇ ಬರುತ್ತಿರುವ ಎಲ್ಲರಿಗೂ ಸಾರಂಗ್ ಹಾಗೂ ಸೂರ್ಯಕಿರಣ್ ಪ್ರದರ್ಶನ ಅತ್ಯಾಕರ್ಷಕ ಅನುಭವ. ಹೀಗಾಗಿ ಮಂಗಳವಾರ ನಡೆದ
ಕಹಿ ಘಟನೆಯಿಂದ ಮೂರು ದಿನಗಳ ಕಾಲ ಪ್ರದರ್ಶನದಿಂದ ಹಿಂದೆ ಸರಿದಿದ್ದ ಸೂರ್ಯ ಕಿರಣ್ ವೈಮಾನಿಕ ತಂಡದ ಪ್ರದರ್ಶನ ಹಾಗೂ ಆಗಸದಲ್ಲಿ ಕೌಶಲ್ಯಗಳ ಚಿತ್ತಾರ ಹರಡಿಸುವ ಸಾರಂಗ್ ಪ್ರದರ್ಶನವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ. ಇದರ ಜತೆಗೆ ಉಳಿದ ವಿಮಾನ-ಹೆಲಿಕಾಪ್ಟರ್ ಹಾಗೂ ಮಹಿಳೆಯರ ಪ್ಯಾರಾ ಜಂಪಿಂಗ್ 

click me!