ಚಾಮರಾಜನಗರದ ಕಿಚ್ಚುಗುತ್ತಿ ಮಾರಮ್ಮ ದೇಗುಲದ ಪ್ರಸಾದದಲ್ಲಿ ವಿಷಾಂಶ ಬೆರೆಸಿರುವುದು ಖಚಿತವಾಗಿದೆ. ವಿಧಿ ವಿಜ್ಞಾನ ನೀಡಿದ ವರದಿಯಲ್ಲಿ ಕೀಟನಾಶಕ ಅಂಶ ಇರುವುದು ಬಹಿರಂಗವಾಗಿದೆ.
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತು ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿರುವುದು ಖಚಿತವಾಗಿದೆ. ಪ್ರಸಾದ ಸೇವಿಸಿ 14 ಮಂದಿ ಮೃತಪಟ್ಟಿದ್ದಾರೆ. 60ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ.
ಮಾರಾಮ್ಮ ದೇವಾಲಯದ ಪ್ರಸಾದವನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದು, ಇಲ್ಲಿಂದ ಬಂದ ವರದಿಯಲ್ಲಿ ಪ್ರಸಾದದಲ್ಲಿ ಕೀಟನಾಶಕ ಬೆರೆಸಿರುವುದು ಬಹಿರಂಗವಾಗಿದೆ.
ಪ್ರಸಾದದಲ್ಲಿ ಮೋನೋ ಕ್ರೋಟೋಫಾಸ್ ಪ್ರಾಸ್ಪರಸ್ ಇನ್ಸೆಕ್ಟೀಸೈಡ್ ವಿಷಕಾರಿ ಅಂಶ ಪತ್ತೆಯಾಗಿದ್ದು, ಇದು ತರಕಾರಿ ಬೆಳೆಗಳ ಕೀಟನಾಶಕವಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಎಸ್.ಪಿ ಧರ್ಮೇಂದ್ರ ಕುಮಾರ್ ಮೀನಾ ಮಾಹಿತಿ ನೀಡಿ ಪ್ರಸಾದದಲ್ಲಿ ಕೀಟನಾಶಕ ಬೆರೆಸಿರುವುದು ಪರೀಕ್ಷೆ ಪತ್ತೆಯಾಗಿದ್ದಾಗಿ ಖಚಿತಪಡಿಸಿದ್ದಾರೆ.
ವಿಷ ಪ್ರಸಾದ: ಇಬ್ಬರು ಸ್ವಾಮೀಜಿಗಳ ವಿಚಾರಣೆಏರುತ್ತಿರುವ ಸಾವಿನ ಸಂಖ್ಯೆಗೆ ಕಾರಣವೇನು..?