ಉದ್ಘಾಟನೆಗೆ ಬಂದಿದ್ರಿ, ಅಷ್ಟು ಮಾಡಿ ಹೋಗಿ: ಸಿಪಿಎಂ ತಪರಾಕಿ!

Published : Jan 16, 2019, 11:32 AM ISTUpdated : Jan 16, 2019, 11:45 AM IST
ಉದ್ಘಾಟನೆಗೆ ಬಂದಿದ್ರಿ, ಅಷ್ಟು ಮಾಡಿ ಹೋಗಿ: ಸಿಪಿಎಂ ತಪರಾಕಿ!

ಸಾರಾಂಶ

ಮೋದಿ ಬಂದೊದ್ ಮೇಲೆ ಶುರುವಾಗಿದೆ ಟ್ವಿಟ್ಟರ್ ವಾರ್| ಪ್ರಧಾನಿ ಮೋದಿಯಿಂದ ಕೇರಳದ ಕೊಲ್ಲಮ್ ಬೈಪಾಸ್ ರಸ್ತೆ ಉದ್ಘಾಟನೆ| ಭಾಷಣದಲ್ಲಿ ಶಬರಿಮಲೆ ವಿವಾದ ಪ್ರಸ್ತಾಪಿಸಿದ್ದ ಮೋದಿ| ಕೇರಳ ಎಲ್‌ಡಿಎಫ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಪ್ರಧಾನಿ| ‘ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೆ ಬಂದಿದ್ದೀರಿ ಅಷ್ಟು ಮಾಡಿ ಹೋಗಿ’| ಮನುವಾದ ಬಿಟ್ಟು ಸಂವಿಧಾನ ಓದಿ ಎಂದ ಸಿಪಿಎಂ

ತಿರುವನಂತಪುರಂ(ಜ.16): ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಕೇರಳದ ಕೊಲ್ಲಮ್‌ನಲ್ಲಿ ಬೈಪಾಸ್ ರಸ್ತೆ ಉದ್ಘಾಟನೆ ಮಾಡಿದ್ದರು. ಈ ಮಧ್ಯೆ ಮೋದಿ ಕೇರಳ ಪ್ರವಾಸದ ಉದ್ದೇಶದ ಕುರಿತಾಗಿ ಆಡಳಿತಾರೂಢ ಸಿಪಿಎಂ ಕಿಡಿಕಾರಿದೆ.

ಕೊಲ್ಲಮ್ ಬೈಪಾಸ್ ರಸ್ತೆ ಉದ್ಘಾಟನೆ ಮಾಡಿ ಮಾತನಾಡಿದ್ದ ಪ್ರಧಾನಿ ಮೋದಿ, ಶಬರಿಮಲೆ ಕುರಿತು ಕೇರಳ ಎಲ್‌ಡಿಎಫ್ ಸರ್ಕಾರ ತೆಗೆದುಕೊಂಡಿರುವ ನಿಲುವನ್ನು ಪ್ರಶ್ನಿಸಿದ್ದರು. ಎಡಪಕ್ಷ ಸರ್ಕಾರದ ಈ ತಪ್ಪು ನಿರ್ಧಾರ ಇತಿಹಾಸದಲ್ಲಿ ದಾಖಲಾಗಲಿದೆ ಎಂದೂ ಮೋದಿ ಹರಿಹಾಯ್ದಿದ್ದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಿಪಿಎಂ, ಪ್ರಧಾನಿ ನರೇಂದ್ರ ಮೋದಿ ಮನುವಾದ ಬಿಟ್ಟು ಭಾರತದ ಸಂವಿಧಾನ ಓದಿಕೊಳ್ಳುವುದು ಒಳಿತು ಎಂದು ಹರಿಹಾಯ್ದಿದೆ.

ಈ ಕುರಿತು ಟ್ವೀಟ್ ಮಾಡಿರುವ ಸಿಪಿಎಂ, ಅಭಿವೃಧ್ಧಿ ಕಾಮಗಾರಿ ಉದ್ಘಾಟನೆಗೆ ಬಂದಿದ್ದ ಮೋದಿ, ಅದನ್ನು ಮಾಡುವುದು ಬಿಟ್ಟು ಶಬರಿಮಲೆ ವಿವಾದ ಕೆದಕಿದ್ದು ಅವರ ಉದ್ದೇಶವನ್ನು ಸಾರುತ್ತದೆ ಎಂದು ಸಿಪಿಎಂ ಹರಿಹಾಯ್ದಿದೆ.

ಭಾರತದ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಪಾಲಿಸುವುದು ಪ್ರತಿಯೊಂದು ಸರ್ಕಾರದ ಕರ್ತವ್ಯ. ಇದನ್ನೇ ಕೇರಳದ ಎಲ್‌ಡಿಎಫ್ ಸರ್ಕಾರ ಮಾಡುತ್ತಿರುವುದು. ಪ್ರಧಾನಿ ಮೋದಿ ಅವರಿಗೆ ಈ ಎಲ್ಲ ವಿಷಯ ಗೊತ್ತಿದೆ. ಆದರೂ ಮನುವಾದಿ ಪಕ್ಷದ ಸದಸ್ಯರಾಗಿ ಅವರು ಅದಕ್ಕೆ ತಕ್ಕಂತೆ ವರ್ತಿಸಿರುವುದು ಆಶ್ಚರ್ಯ ತಂದಿಲ್ಲ ಎಂದು ಸಿಪಿಎಂ ವ್ಯಂಗ್ಯವಾಡಿದೆ.

ಕುದಿಯುತ್ತಿರುವ ಕೇರಳದಲ್ಲಿ ಮೋದಿ: ಒಂದೇ ಮಂತ್ರ ಅಭಿವೃದ್ಧಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

8ನೇ ಕ್ಲಾಸ್ ಹುಡುಗಿ ಮೇಲೆ ಬಲತ್ಕಾರ, ಬೆದರಿಸಿ ಚಿನ್ನ ದೋಚಿದ್ದ 10ನೇ ಕ್ಲಾಸ್ ಹುಡುಗ ಅರೆಸ್ಟ್
ಬಿಜೆಪಿ ನಾಯಕನ ಸಂಬಂಧಿ 17ರ ಯುವಕನಿಗೆ ಚೂರಿ ಇರಿದು ಕೊಂದ ದುಷ್ಕರ್ಮಿಗಳು!