ಬಿ.ಎಸ್.ಯಡಿಯೂರಪ್ಪ ಸಂಪುಟಕ್ಕೆ ಮಾಜಿ ಶಾಸಕ : ಸಚಿವ ಸ್ಥಾನ ಪಕ್ಕಾ!

By Web DeskFirst Published Aug 1, 2019, 1:04 PM IST
Highlights

ರಾಜ್ಯದಲ್ಲಿ ಬಿಜೆಪಿ ಸರ್ಕಾರರಚನೆ ಮಾಡಿ ಒಂದು ವಾರ ಕಳೆದರೂ ಕೂಡ ಇನ್ನೂ ಸಂಪುಟ ವಿಸ್ತರಣೆಯಾಗಿಲ್ಲ. ಇದೇ ವೇಳೆ ಮಾಜಿ ಶಾಸಕರೋರ್ವರಿಗೆ ಸಚಿವ ಸ್ಥಾನ ನೀಡುವುದು ಪಕ್ಕಾ ಎನ್ನಲಾಗಿದೆ. 

ಬೆಂಗಳೂರು[ಆ.01]: ಬಿಜೆಪಿ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರಿಗೆ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವುದು ಪಕ್ಕಾ ಎನ್ನಲಾಗಿದೆ. 

"

MLC ಸ್ಥಾನ ನೀಡುವ ಮೂಲಕ ಸಿ.ಪಿ. ಯೋಗೇಶ್ವರ್ ಅವರನ್ನು ಸಚಿವರನ್ನಾಗಿ ಆಯ್ಕ ಮಾಡುವ ಸಾಧ್ಯತೆ ಇದೆ. ಈ ಮೂಲಕ ಬಿ ಎಸ್ ವೈ ಸಂಪುಟ ಸೇರಲು ಸಿಪಿವೈ ಸಜ್ಜಾಗಿದ್ದಾರೆ ಎನ್ನಲಾಗಿದೆ. 

ಇಬ್ಬರಲ್ಲಿ ಯಾರಿಗೆ ಒಲಿಯುತ್ತೆ BSY ಸಂಪುಟದಲ್ಲಿ DCM ಸ್ಥಾನ?

ದೋಸ್ತಿ ಸರ್ಕಾರದ ಅತೃಪ್ತ ಶಾಸಕರು ರಾಜೀನಾಮೆ ನೀಡುವ ಸಂದರ್ಭದಲ್ಲಿ ಯೋಗೇಶ್ವರ್ ಕೂಡ ಜೊತೆ ಇರುವ ಬಗ್ಗೆ ಸುದ್ದಿಯಾಗಿದ್ದು,  ಯಡಿಯೂರಪ್ಪ ಸೂಚನೆಯಂತೆ ಎಲ್ಲಾ ಟಾಸ್ಕ್ ಗಳಲ್ಲಿಯೂ ಕೂಡ ತೊಡಗಿದ್ದರಿಂದ ಮಂತ್ರಿ ಸ್ಥಾನ ನೀಡಲಾಗುತ್ತಿದೆ ಎನ್ನಲಾಗಿದೆ. 

ಸಚಿವ ಸ್ಥಾನ ಹಂಚಿಕೆ ಒಂದು ವಾರ ಮುಂದಕ್ಕೆ : ಹಿಂದಿದೆಯಾ BSY ಪ್ಲಾನ್?

ಅಲ್ಲದೇ ಮೈಸೂರು ಹಾಗೂ ಮಂಡ್ಯ ಭಾಗದಲ್ಲಿ ಬಿಜೆಪಿ ಬಲಪಡಿಸುತ್ತಿರುವ C.P.ಯೋಗೇಶ್ವರ್ ಸಿಎಂ ಯಡಿಯೂರಪ್ಪ ಆಪ್ತ ವಲಯದಲ್ಲಿಯೇ ಗುರುತಿಸಿಕೊಂಡಿದ್ದಾರೆ. 

ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿಯೂ ಕೂಡ ಯೋಗೇಶ್ವರ್ ಅರಣ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು, ಇದೀಗ ಮತ್ತೊಮ್ಮೆ ಸಚಿವ ಸ್ಥಾನ ನೀಡಲಾಗುತ್ತಿದೆ ಎನ್ನಲಾಗಿದೆ. 

click me!