ಬೆಂಗಳೂರಿನಲ್ಲಿ ನಕಲಿ ಪಂಡಿತರಿಂದ ಕರಾಳ ದಂಧೆ: ಆಯುರ್ವೇದ ಹೆಸರಲ್ಲಿ ಜನರಿಗೆ ವಂಚನೆ

By Suvarna Web DeskFirst Published Dec 2, 2017, 10:53 AM IST
Highlights

ಬೆಂಗಳೂರಿನ ಶಿವಶಕ್ತಿ ಆಯುರ್ವೇದ ಸೆಂಟರ್ ರಾಮು ಮತ್ತು ಜಗನ್ನಾಥ್ ಎನ್ನುವ ನಕಲಿ ಪಂಡಿತರು ಇಂತಹ ಕರಾಳ ದಂಧೆಗೆ ಇಳಿದಿದ್ದಾರೆ. ಅಲ್ಲದೇ ಯಲಹಂಕದ ಬಳಿಯಲ್ಲಿಯೂ ಕೂಡ ನಕಲಿ ಆಯುರ್ವೇದ ಪಂಡಿತರು ಇಂತಹ ನಕಲಿ ಔಷಧ ಮಾರಾಟ ದಂಧೆಗೆ ಇಳಿದಿದ್ದಾರೆ.

ಬೆಂಗಳೂರು(ಡಿ.2): ಬೆಂಗಳೂರಿಗರೇ ನೀವು ಆಯುರ್ವೇದ ಬಳಸುವ ಮುನ್ನ ಈ ಸ್ಟೋರಿ ಕೇಳಿ. ಆಯುರ್ವೇದ ಬಳಕೆ ಮಾಡುವ ಮುನ್ನ ನೀವು ಇಲ್ಲೊಮ್ಮೆ ಗಮನಿಸಬೇಕಾದ ಅಗತ್ಯವಿದೆ. ಯಾಕೆಂದರೆ ನಮ್ಮ ಕವರ್ ಸ್ಟೋರಿ ತಂಡ ನಕಲಿ ಆಯುರ್ವೇದ ಪಂಡಿತರ ವಂಚನೆಯ ವಿಚಾರವನ್ನು ಬಯಲಿಗೆ ಎಳೆದಿದೆ. ಗಿಡಮೂಲಿಕೆ ಹೆಸರಿನಲ್ಲಿ ಇಂತಹ ನಕಲಿ ಪಂಡಿತರು ಕೆಮಿಕಲ್'ಗಳನ್ನು ಬಳಸಿಕೊಂಡು ಆಯುರ್ವೇದ ಎಂದು ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ.

ಬೆಂಗಳೂರಿನ ಶಿವಶಕ್ತಿ ಆಯುರ್ವೇದ ಸೆಂಟರ್ ರಾಮು ಮತ್ತು ಜಗನ್ನಾಥ್ ಎನ್ನುವ ನಕಲಿ ಪಂಡಿತರು ಇಂತಹ ಕರಾಳ ದಂಧೆಗೆ ಇಳಿದಿದ್ದಾರೆ. ಅಲ್ಲದೇ ಯಲಹಂಕದ ಬಳಿಯಲ್ಲಿಯೂ ಕೂಡ ನಕಲಿ ಆಯುರ್ವೇದ ಪಂಡಿತರು ಇಂತಹ ನಕಲಿ ಔಷಧ ಮಾರಾಟ ದಂಧೆಗೆ ಇಳಿದಿದ್ದಾರೆ.

ಈ ಪಂಡಿತರು ಆಯುರ್ವೇದದ ಹೆಸರಿನಲ್ಲಿ ನೋವು ನಿವಾರಕಗಳು ಎಂದು ನೀಡುವ ಔಷಧಗಳು ಪ್ರಾಣಕ್ಕೂ ಕುತ್ತು ತರುವ ಸಾಧ್ಯತೆಗಳು ಇದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಯಾಕೆಂದರೆ ಇದರಲ್ಲಿ ಸ್ಟಿರಾಯ್ಡ್ ಬಳಕೆ ಮಾಡಿಕೊಂಡು ಔಷಧವನ್ನು ತಯಾರಿ ಮಾಡುತ್ತಿದ್ದಾರೆ. ಇದರಿಂದ  ಮಾನವ ದೇಹದ ವಿವಿಧ ಅಂಗಾಗಳಿಗೂ ಕೂಡ ಹಾನಿಯುಂಟಾಗಲಿದೆ. ಇಷ್ಟೇ ಅಲ್ಲದೇ ಮಕ್ಕಳಾಗಲೂ ಕೂಡ ಇವರು ಔಷಧವನ್ನು ನೀಡುತ್ತಾರೆ.  ಒಟ್ಟಿನಲ್ಲಿ ಜನರ ಉದ್ದಾರಕ್ಕಲ್ಲದೇ ಇವರು ತಮ್ಮ ಅಭಿವೃದ್ಧಿಗಾಗಿ ಇಂತಹ ದಂಧೆಗೆ ಇಳಿದಿದ್ದಾರೆ.

click me!