ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್'ಗೆ ಹಿನ್ನಡೆ; ತನಿಖೆಗೆ ಕೋರ್ಟ್ ಆದೇಶ

By Suvarna Web DeskFirst Published May 12, 2017, 11:12 AM IST
Highlights

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಮತ್ತೊಮ್ಮೆ ಹಿನ್ನೆಡೆಯಾಗಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆಗೆ ತನಿಖೆ ನಡೆಸುವಂತೆ ದೆಹಲಿ ನ್ಯಾಯಾಲಯ ಹೇಳಿದೆ. ನೀವು ಅಹಂಕಾರ ತೋರಿಸದೇ ತೆರಿಗೆ ದಾಖಲೆಗಳನ್ನು ಸಲ್ಲಿಸಿದೆ ಎಂದು ನ್ಯಾಯಾಲಯ   ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಗೆ ಖಾರವಾಗಿ ಹೇಳಿದೆ.

ನವದೆಹಲಿ (ಮೇ.12): ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಮತ್ತೊಮ್ಮೆ ಹಿನ್ನೆಡೆಯಾಗಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆಗೆ ತನಿಖೆ ನಡೆಸುವಂತೆ ದೆಹಲಿ ನ್ಯಾಯಾಲಯ ಹೇಳಿದೆ. ನೀವು ಅಹಂಕಾರ ತೋರಿಸದೇ ತೆರಿಗೆ ದಾಖಲೆಗಳನ್ನು ಸಲ್ಲಿಸಿದೆ ಎಂದು ನ್ಯಾಯಾಲಯ   ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಗೆ ಖಾರವಾಗಿ ಹೇಳಿದೆ.

ಈ ಹಿಂದೆ ಪಟಿಯಾಲ ಹೌಸ್ ಕೋರ್ಟ್ ಕೂಡಾ ತನಿಖೆಗೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕಂಪನಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು.  ನಾವು ನಿಮ್ಮ ಅರ್ಜಿಯನ್ನು ಪರಿಶೀಲಿಸುವುದಿಲ್ಲ. ನೀವು ಇದನ್ನು ಹಿಂತೆಗೆದುಕೊಳ್ಳುವುದು ಒಳ್ಳೆಯದು.  ಆದಾಯ ತೆರಿಗೆ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಕೋರ್ಟ್ ಸೂಚಿಸಿದೆ. ಅದರಂತೆ ಯಂಗ್ ಇಂಡಿಯನ್ ಕಂಪನಿ ಅರ್ಜಿಯನ್ನು ಹಿಂತೆಗೆದುಕೊಂಡಿದೆ.  ಕಾಂಗ್ರೆಸ್ ನಿರೀಕ್ಷೆ ಸುಳ್ಳಾಗಿದ್ದು ಅವರಿಗೆ ಹಿನ್ನೆಡೆಯಾಗಿದೆ.

‘ದೆಹಲಿ ನ್ಯಾಯಾಲಯದ ತೀರ್ಪಿನಿಂದ ನಮಗೆ ಹಿನ್ನೆಡೆಯಾಗಿಲ್ಲ. ನಾವು ತೆರಿಗೆ ಇಲಾಖೆಯನ್ನು ಸಂಪರ್ಕಿಸಿ  ಆಕ್ಷೇಪವನ್ನು ಎತ್ತುತ್ತೇವೆ. ಯಂಗ್ ಇಂಡಿಯನ್ ವಿರುದ್ಧ ತನಿಖೆ ನಡೆಸಲು ಆದಾಯ ಇಲಾಖೆ ಬಳಿ ಸೂಕ್ತ ಪುರಾವೆಗಳಿಲ್ಲ ಎಂದು ಹಿರಿಯ ವಕೀಲ, ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಗ್ವಿ ಹೇಳಿದ್ದಾರೆ.

click me!