ಝಾಕಿರ್ ನಾಯ್ಕ್ ವಿರುದ್ಧ ಬಂಧನದ ವಾರಂಟ್

Published : Apr 13, 2017, 04:46 PM ISTUpdated : Apr 11, 2018, 12:58 PM IST
ಝಾಕಿರ್ ನಾಯ್ಕ್ ವಿರುದ್ಧ ಬಂಧನದ ವಾರಂಟ್

ಸಾರಾಂಶ

ಝಾಕಿರ್ ನಾಯ್ಕ್ ಸಂಸ್ಥೆಯ ವಿರುದ್ಧ ಹಣದ ಅಕ್ರಮ ವಹಿವಾಟು ತಡೆ ಕಾಯ್ದೆ (ಪಿಎಂಎಲ್ಏ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿರುವ ಈಡಿ, ಸಂಸ್ಥೆಗೆ ಸೇರಿದ 18 ಕೋಟಿ ಮೌಲ್ಯದ ಆಸ್ತಿಯನ್ನು ಈ ಹಿಂದೆ ಮುಟ್ಟುಗೋಲು ಹಾಕಿದೆ.

ಮುಂಬೈ (ಏ. 13): ವಿವಾದಾತ್ಮಕ ಧಾರ್ಮಿಕ ವಿದ್ವಾಂಸ ಡಾ. ಝಾಕಿರ್ ನಾಯಕ್ ವಿರುದ್ಧ ನ್ಯಾಯಾಲಯವು ಜಾಮೀನು-ರಹಿತ ಬಂಧನ ವಾರಂಟನ್ನು ಜಾರಿಗೊಳಿಸಿದೆ.

ಜಾರಿ ನಿರ್ದೇಶನಾಲಯವು (ಈಡಿ) ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ ವಿಶೇಷ ಪಿಎಂಎಲ್ಏ ನ್ಯಾಯಾಲಯವು, ಝಾಕಿರ ನಾಯ್ಕ್ ವಿರುದ್ಧ ವಾರಂಟನ್ನು ಜಾರಿಗೊಳಿಸಿದೆ.

ಝಾಕಿರ್ ನಾಯ್ಕ್ ಸಂಸ್ಥೆಯ ವಿರುದ್ಧ ಹಣದ ಅಕ್ರಮ ವಹಿವಾಟು ತಡೆ ಕಾಯ್ದೆ (ಪಿಎಂಎಲ್ಏ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿರುವ ಈಡಿ, ಸಂಸ್ಥೆಗೆ ಸೇರಿದ 18 ಕೋಟಿ ಮೌಲ್ಯದ ಆಸ್ತಿಯನ್ನು ಈ ಹಿಂದೆ ಮುಟ್ಟುಗೋಲು ಹಾಕಿದೆ.

ವಿವಿಧ ಸಮುದಾಯಗಳ ನಡುವೆ ದ್ವೇಷ ಹುಟ್ಟು ಹಾಕುವ ಆರೋಪದಲ್ಲಿ ಝಾಕಿರ್ ನಾಯಕ್ ಸಂಸ್ಥೆಗೆ ಕೇಂದ್ರ ಸರ್ಕಾರವು ನಿಷೇಧ ಹೇರಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೈ ಅಭ್ಯರ್ಥಿಗಳ ಸೋಲಿಗೆ ಆ ಪಕ್ಷದ ನಾಯಕರೇ ಮುಂದು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ
28ರ ಜಿಮ್ ಟ್ರೈನರ್‌ಗೆ 42ರ ಮಹಿಳೆ ಜೊತೆ ಸಂಬಂಧ? ಯುವಕನ ಸಾವಿನ ಹಿಂದೆ ಆಂಟಿ ಕರಿನೆರಳು