ತೆರಿಗೆ ವಂಚನೆ ಪ್ರಕರಣದಲ್ಲಿ ಶಶಿಕಲಾ ಪತಿಗೆ ಜೈಲು

Published : Nov 17, 2017, 06:39 PM ISTUpdated : Apr 11, 2018, 12:44 PM IST
ತೆರಿಗೆ ವಂಚನೆ ಪ್ರಕರಣದಲ್ಲಿ ಶಶಿಕಲಾ ಪತಿಗೆ ಜೈಲು

ಸಾರಾಂಶ

ಇದು 23 ವರ್ಷಗಳ ಅಂದರೆ 1994ರ ಹಳೆಯ ಪ್ರಕರಣವಾಗಿದ್ದು ಲಕ್ಸ್'ಸ್ ಕಾರನ್ನು ಆಮದು ಮಾಡಿಕೊಂಡಿದ್ದ ನಟರಾಜನ್ 1.6 ತೆರಿಗೆ ಪಾವತಿಸರಿರಲಿಲ್ಲ.

ಚೆನ್ನೈ(ನ.17): ತೆರಿಗೆ ವಂಚನೆ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಅವರ ಪತಿ ನಟರಾಜನ್ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸಿಬಿಐ ಕೋರ್ಟ್ 2010ರಲ್ಲಿ ವಿಧಿಸಿದ್ದ ನಟರಾಜನ್ ಹಾಗೂ ಇತರ ಮೂವರ 2 ವರ್ಷ ಸೆರೆಮನೆ ವಾಸದ ಶಿಕ್ಷೆಯನ್ನು ಎತ್ತಿಹಿಡಿದಿದೆ.  

ಇದು 23 ವರ್ಷಗಳ ಅಂದರೆ 1994ರ ಹಳೆಯ ಪ್ರಕರಣವಾಗಿದ್ದು ಲಕ್ಸ್'ಸ್ ಕಾರನ್ನು ಆಮದು ಮಾಡಿಕೊಂಡಿದ್ದ ನಟರಾಜನ್ 1.6 ತೆರಿಗೆ ಪಾವತಿಸರಿರಲಿಲ್ಲ. ಈ ಸಂಬಂಧ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ದೂರು ದಾಖಲಿಸಿಕೊಂಡಿದ್ದವು. ಇತ್ತೀಚಿಗಷ್ಟೆ ಆದಾಯ ತೆರಿಗೆ ಅಧಿಕಾರಿಗಳು ನಟರಾಜನ್ ಮನೆಯನ್ನು ಶೋಧಿಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಶಶಿಕಲಾ ಅವರು 2017ರ ಫೆಬ್ರವರಿಯಿಂದ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ 4 ವರ್ಷಗಳ ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ.      

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ