ಇದು ಸರ್ಕಾರ, ವೈದ್ಯರ ಗೆಲುವಲ್ಲ, ಜನಸಾಮಾನ್ಯರ ಗೆಲುವು: ರಮೇಶ್ ಕುಮಾರ್

Published : Nov 17, 2017, 06:01 PM ISTUpdated : Apr 11, 2018, 12:40 PM IST
ಇದು ಸರ್ಕಾರ, ವೈದ್ಯರ ಗೆಲುವಲ್ಲ, ಜನಸಾಮಾನ್ಯರ ಗೆಲುವು: ರಮೇಶ್ ಕುಮಾರ್

ಸಾರಾಂಶ

ಎಲ್ಲರ ಆರೋಗ್ಯ ಸುರಕ್ಷತೆಗೆ ಕ್ರಮ ಕೈಗೊಳ್ಳುವುದು ನಮ್ಮ ಹೊಣೆ.  ಖಾಸಗಿ ವೈದ್ಯರಿಗೆ ತೊಂದರೆ ಕೊಡಬೇಕೆಂಬ ಉದ್ದೇಶ ನಮಗಿಲ್ಲ. ಜನಸಾಮಾನ್ಯರಿಗೆ ಒಳ್ಳೆಯದಾಗಬೇಕೆಂಬುದೇ ಸರ್ಕಾರದ ಗುರಿ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಬೆಂಗಳೂರು (ನ.17): ಎಲ್ಲರ ಆರೋಗ್ಯ ಸುರಕ್ಷತೆಗೆ ಕ್ರಮ ಕೈಗೊಳ್ಳುವುದು ನಮ್ಮ ಹೊಣೆ.  ಖಾಸಗಿ ವೈದ್ಯರಿಗೆ ತೊಂದರೆ ಕೊಡಬೇಕೆಂಬ ಉದ್ದೇಶ ನಮಗಿಲ್ಲ. ಜನಸಾಮಾನ್ಯರಿಗೆ ಒಳ್ಳೆಯದಾಗಬೇಕೆಂಬುದೇ ಸರ್ಕಾರದ ಗುರಿ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದು ತಪ್ಪಲ್ಲ.  ತಪ್ಪು ಗ್ರಹಿಕೆಯಿಂದ ಈ ರೀತಿಯ ಮುಷ್ಕರದ ಪರಿಸ್ಥಿತಿ ನಿರ್ಮಾಣವಾಗಿದೆ.  ಸರ್ಕಾರವೂ ಗೆದ್ದಿಲ್ಲ. ವೈದ್ಯರೂ ಗೆದ್ದಿಲ್ಲ. ಇದು  ಜನಸಾಮಾನ್ಯರ ಗೆಲುವು ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

ವಿಧೇಯಕದಲ್ಲಿ ಯಾವುದೇ ಗೊಂದಲಗಳು ಸಹ ಈಗ ಇಲ್ಲ. ಎಲ್ಲವೂ ಇತ್ಯರ್ಥವಾಗಿದೆ.  ವಿಧೇಯಕದಲ್ಲಿ ಹೇಳಿಕೊಳ್ಳುವ ರೀತಿಯಲ್ಲಿ ಯಾವುದೇ ಬದಲಾವಣೆಗಳು ಇಲ್ಲ. ನನ್ನ ರಾಜಕೀಯ ಬದುಕಿನ ಐತಿಹಾಸಿಕ ಕಾರ್ಯ ಇದಾಗಿದೆ. ರೋಗಿಯ ಸಾವಿನ ನಂತರ ಬಿಲ್ ಕಟ್ಟಿಲ್ಲವೆಂದು ಶವ ಹಸ್ತಾಂತರಕ್ಕೆ ನಿರಾಕರಿಸುವಂತಿಲ್ಲ ಎಂಬ ಅಂಶವನ್ನು ಹೊಸ ವಿಧೇಯಕದಲ್ಲಿ  ಸೇರಿಸಲಾಗಿದೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!